ಸ್ಕೂಟಿ ಸಮೇತ ಕೆರೆಗೆ ಬಿದ್ದು ಉದ್ಯಮಿ ಸಾವು
ಕುಂದಾಪುರ:ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಯಾಡಿ ಸಮೀಪದರಸ್ತೆಯಲ್ಲಿ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿದ ಸ್ಕೂಟಿ ರಸ್ತೆ ಪಕ್ಕದಲ್ಲಿದ್ದ ಕೆರೆಗೆ ಬಿದ್ದು ಸವಾರರಾದ ಉದ್ಯಮಿ ದಿವಾಕರ ಶೆಟ್ಟಿ (65) ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಧಾರಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ದಿವಾಕರ ಶೆಟ್ಟಿ ಅವರು ಸ್ಕೂಟಿಯಲ್ಲಿ ಮನೆಗೆ ಸಂಚರಿಸುವ ವೇಳೆ ಸ್ಕಿಡ್ ಆಗಿ ಸ್ಕೂಟಿ ಸಮೇತ ಕೆರೆಗೆ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ.ಮಲ್ಯಾಡಿ ರಸ್ತೆ ಪಕ್ಕದಲ್ಲಿರುವ ಬೃಹತ್ ಕೆರೆಗೆ ಯಾವುದೇ ರೀತಿಯ ತಡೆಗೋಡೆ ಇಲ್ಲದ ಕಾರಣ 15 […]