ಶಿರೂರು ಹಾಡುಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಲೂಟಿ

ಬೈಂದೂರು:ಹಾಡುಹಗಲೇ ಮನೆಗೆ ನುಗ್ಗಿ ಮೂರು ಲಕ್ಷಕ್ಕೂ ಅಧಿಕ ಚಿನ್ನಾಭರಣ ಕದ್ದೋಯ್ದ ಘಟನೆ ಶಿರೂರಿನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.ಇಲ್ಲಿನ ಶಿರೂರು ಮಾರ್ಕೆಟ್ ಬಳಿ ಠಾಕೇಶ್ ಪಟಗಾರ್ ದಂಪತಿಗಳು ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಮದ್ಯಾಹ್ನ ಊಟ ಮುಗಿಸಿ ಕಾಲೇಜಿಗೆ ಮರಳಿದ ಸಮಯ ನೋಡಿ ಹಿಂಬಾಗಿಲಿನಿಂದ ನುಗ್ಗಿದ ಕಳ್ಳರು 32 ಗ್ರಾಂ ಮಾಂಗಲ್ಯ ಸರ ಸೇರಿದಂತೆ,10 ಗ್ರಾಂ ಕಿವಿಯೋಲೆ, 100 ಗ್ರಾಂ ಬೆಳ್ಳಿ ಹಾಗೂ 1000 ರೂಪಾಯಿ ನಗದು ಕದ್ದೊಯ್ದಿದ್ದಾರೆ.ಪಕ್ಕದ ಮನೆಗೆ ತೆರಳಿ ಅಲ್ಲೂ ಕೂಡ ಬಾಗಿಲು ಒಡೆಯುತ್ತಿರುವುದನ್ನು ನೋಡಿ ಮನೆಯವರು ಕೂಗಿದ […]

ವಿಶ್ವ ಪ್ರಸಿದ್ಧ ಜೋಗ ಜಲಪಾತ,ಸರ್ವಋತು ಪ್ರವಾಸಿ ತಾಣವಾಗಿಸಲು ಪಣ-ಬಿ.ವೈ ರಾಘವೇಂದ್ರ

ಸಾಗರ:ಸಂಸದ ಬಿ.ವೈ ರಾಘವೇಂದ್ರ ಅವರು ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿ ವಿಶ್ವ ಪ್ರಸಿದ್ಧ ಜೋಗ ಜಲಪಾತದ ರುದ್ರ ರಮಣೀಯತೆ ಕಣ್ಮನ ಸೆಳೆಯುವಂತಹದ್ದು,ಇದನ್ನು ಸರ್ವಋತು ಪ್ರವಾಸಿತಾಣವಾಗಿಸಲು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಯೋಜಿಸಲಾಗಿದೆ ಎಂದು ಹೇಳಿದರು.ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

ಜುಲೈ.16 ರಂದು ದೇವಾಡಿಗ ನವೋದಯ ಸಂಘ ಬೆಂಗಳೂರು ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ

ಕುಂದಾಪುರ:ದೇವಾಡಿಗ ನವೋದಯ ಸಂಘ ಬೆಂಗಳೂರು ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಜುಲೈ.16 ರಂದು ಭಾನುವಾರ ಜಿ.ಬಿ.ಬಿ ಕಲ್ಯಾಣ ಮಹಲ್ ನಂ.3/1,1ನೇ ಕ್ರಾಸ್,ಎ.ಸಿ.ಆರ್ ಬಡಾವಣೆ, ಸೆಂಟ್ರಲ್ ಲೈಬ್ರರಿ ಹತ್ತಿರ (ವೀರೇಶ್ ಟಾಕೀಸ್ ಹಿಂಭಾ) ವಿಜಯ ನಗರ, ಬೆಂಗಳೂರು.ನಲ್ಲಿ ನಡೆಯಲಿದೆ. ಆಟಿಡೊಂಜಿ ಕಾರ್ಯಕ್ರಮದ ಪ್ರಯುಕ್ತ ಕಿರಿಯರ ವಿಭಾಗದ ಛದ್ಮವೇಷ ಸ್ಪರ್ಧೆ,ಜೊತೆಗೆ ವಿವಿಧ ಕಲಾ ಪ್ರತಿಭೆಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಲ್ಲಿ ಅವಕಾಶವಿದೆ.ನೃತ್ಯ, ಸಂಗೀತ, ಸ್ಕಿಟ್, ಇನ್ನಿತರ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ,ಸಭಾ ಕಾರ್ಯಕ್ರಮ ಜರುಗಲಿದೆ. (ಜುಲೈ.16 […]

You cannot copy content of this page