ಹೊಗೆ ಮೀನು ಶಿಕಾರಿ ಜೋರು

ಕುಂದಾಪುರ:ಎಡಬಿಡದೆ ಸುರಿದ ಬಾರಿ ಮಳೆಗೆ ಹಳ್ಳ,ಕೊಳ್ಳ,ಗದ್ದೆಗಳು ತುಂಬಿ ತೋಡಿನಲ್ಲಿ ನೀರು ಹರಿದ ಪರಿಣಾಮ ಬಡಾಕೆರೆ ಭಾಗದಲ್ಲಿ ಹೊಗೆ ಮೀನುಗಳ ರಾಶಿ ಕಂಡು ಬಂದಿದೆ,ಸ್ಥಳೀಯರು ಭರ್ಜರಿ ಆಗಿ ಮೀನಿನ ಶಿಕಾರಿಯನ್ನು ಮಾಡಿದರು.ಮೊದಲ ಮಳೆಗೆ ಹಿನ್ನಿರಿನಿಂದ ಮೀನುಗಳು ತೋಡಿನ ಮೂಲಕ ಗದ್ದೆಗಳತ್ತಾ ಧಾವಿಸಿ ಬರುತ್ತವೆ ಇದು ಒಂದೆರಡು ದಿನಗಳಿಗೆ ಮಾತ್ರ ಸೀಮಿತವಾಗುವ ಸಂದರ್ಭವಾಗಿದೆ.

ಚರಂಡಿಗೆ ಬಿದ್ದು ವಯೋವೃದ್ಧ ಸಾವು,ಸಾರ್ವಜನಿಕರು ಆಕ್ರೋಶ

ಕುಂದಾಪುರ:ರಾಷ್ಟ್ರೀಯ ಹೆದ್ದಾರಿಯಲ್ಲಿನ ಚರಂಡಿ ಹೊಂಡಕ್ಕೆ ಬಿದ್ದು ವಯೋವೃದ್ಧರೊಬ್ಬರು ಮೃತಪಟ್ಟ ಘಟನೆ ತೆಕ್ಕಟ್ಟೆಯಲ್ಲಿ ಶುಕ್ರವಾರ ನಡೆದಿದೆ.ಚರಂಡಿ ಅವ್ಯವಸ್ಥೆಯಿಂದ ಹಿರಿಯ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಸಂಬಂಧಪಟ್ಟ ಇಲಾಖೆ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು,ಚರಂಡಿ ವ್ಯವಸ್ಥೆಯನ್ನು ಸರಿ ಪಡಿಸುವಂತೆ ಆಗ್ರಹಿಸಿದ್ದಾರೆ

ಹರಸಾಹಸ ಪಟ್ಟು ಟ್ರ್ಯಾಕ್ಟರ್ ಮೇಲಕ್ಕೆ ಎತ್ತಿದ ರೈತರು

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಾಡು ಬೈಲಿಗೆ ಗದ್ದೆ ಉಳುಮೆ ಮಾಡಲು ಬಂದ ಟ್ರ್ಯಾಕ್ಟರ್ ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿದ್ದ ಹೊಂಡಕ್ಕೆ ಬಿದ್ದು ತೊಂದರೆಗೆ ಸಿಲುಕಿದ ಘಟನೆ ಗುರುವಾರ ನಡೆದಿದೆ.ಹರಸಾಹಸ ಪಟ್ಟು ರೈತರು ಟ್ರ್ಯಾಕ್ಟರ್‍ನ್ನು ಮೇಲಕ್ಕೆ ಎತ್ತಿದ್ದಾರೆ.ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ಬೈಂದೂರು ತಾಲೂಕಿನಾದ್ಯಂತ ರಸ್ತೆ ಬದಿಯಲ್ಲಿ ಹೊಂಡ ತೆಗೆದು ನೀರಿನ ಪೈಪ್ ಅಳವಡಿಕೆ ಮಾಡಲಾಗಿದೆ.ನೀರಿನ ಪೈಪ್ ಅಳವಡಿಕೆ ಮಾಡಲು ಕೈಗೊಂಡಿದ್ದ ಹೊಂಡಗಳನ್ನು ಮಣ್ಣಿನಿಂದ ಮುಚ್ಚಿದ್ದರು […]

You cannot copy content of this page