ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ವತಿಯಿಂದ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ

ಉಡುಪಿ:ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ವತಿಯಿಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ್ ಉಡುಪ ಅವರನ್ನು ಭೇಟಿ ಮಾಡಿ ಬೆನ್ನುಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರಕ್ಕೆ ಕೊರಂಗ್ರಪಾಡಿಯಲ್ಲಿನ ಸರ್ಕಾರಿ ಶಾಲೆಯ ಜಾಗವನ್ನು ಸೇವಾಭಾರತಿ ಸಂಸ್ಥೆಗೆ ಕಲ್ಪಿಸುವಂತೆ ಮನವಿ ಮಾಡಲಾಯಿತು. ಉಡುಪಿ ಜಿಲ್ಲೆಯಲ್ಲಿರುವ ಒಟ್ಟು 80 ಮಂದಿ ಬೆನ್ನುಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರ ಮನೆಗೆ 108 ಅಂಬುಲೆನ್ಸ್ ನ ಮುಖಾಂತರ ಆರೋಗ್ಯ ಸ್ಪರ್ಶ ಯೋಜನೆಯಡಿ ಮನೆ ಮನೆಗೆ ಭೇಟಿ ಮಾಡಿ ದಿವ್ಯಾಂಗ ಚೇತನರನ್ನು ತಪಾಸಣೆ ಮಾಡುವ ಕುರಿತು ಹಾಗೂಉಡುಪಿ ಜಿಲ್ಲೆಯಲ್ಲಿರುವ […]

ಘನಪಾಠಿ ಕೆ.ಗೋವಿಂದ ಪ್ರಕಾಶ ಭಟ್ಟಗೆ ಸನ್ಮಾನ

ಕುಂದಾಪುರ:ಘನಪಾಠಿ ವಿದ್ವಾನ್ ಬಿ.ಕೆ ಲಕ್ಷ್ಮೀನಾರಾಯಣ ಭಟ್ ಗುರುಶಿಷ್ಯರು ಮತ್ತು ವೇದಾಭಿಮಾನಿಗಳ ಪರಿಷತ್ ಕುಂದಾಪುರ ವತಿಯಿಂದ ಆಹಿತಾಗ್ನಿ ಘನಪಾಠಿ ಕೆ.ಗೋವಿಂದ ಪ್ರಕಾಶ ಭಟ್ ಅವರನ್ನು ಶೃಂಗೇರಿಯಲ್ಲಿನ ಅವರ ವೇದಶ್ರೀ ನಿವಾಸದಲ್ಲಿ ನಗದು ಪುರಸ್ಕಾರವನ್ನು ನೀಡಿ ಘನಪಾಠಿ ಬಿ.ಕೆ ಲಕ್ಷ್ಮೀನಾರಾಯಣ ಭಟ್ ಸನ್ಮಾನಿಸಿದರು.ಕುಂದಾಪುರ ತಾಲೂಕಿನ ಹೊಸಾಡು ಗಣೇಶ್ ಸೊಸೈಟಿ ಅಧ್ಯಕ್ಷ ಮುರಳೀಧರ ಐತಾಳ್ ಸ್ವಾಗತಿಸಿ ವಂದಿಸಿದರು.

ಶಾಸಕ ಗುರುರಾಜ್ ಗಂಟಿಹೊಳೆ ಗಂಗೊಳ್ಳಿ ಜೆಟ್ಟಿ ಪರಿಶೀಲನೆ

ಕುಂದಾಪುರ:ಕಳೆದ ವರ್ಷ ಜೆಟ್ಟಿ ಕುಸಿತದಿಂದ ಹಾನಿ ಸಂಭವಿಸಿದ ಗಂಗೊಳ್ಳಿ ಗಂಗೊಳ್ಳಿ ಬಂದರಿಗೆ ಗುರುರಾಜ್ ಗಂಟಿಹೊಳೆ ಭೇಟಿ ಸ್ಥಳ ಪರಿಶೀಲನೆ ಮಾಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.ಈ ಸಂದರ್ಭದಲ್ಲಿ ಗಂಗೊಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ,ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಹಿರಿಯ ಮೀನುಗಾರರಾದ ರಾಮಪ್ಪ ಖಾರ್ವಿ,ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ,ಅಧಿಕಾರಿಗಳು ಉಪಸ್ಥಿತರಿದ್ದರು.

You cannot copy content of this page