ಗಂಗೊಳ್ಳಿ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ

ಕುಂದಾಪುರ:ಸೇವಾ ಕಾರ್ಯಗಳ ಮೂಲಕ ರೊಟರಿ ಕ್ಲಬ್ ಗಂಗೊಳ್ಳಿ ಉತ್ತಮವಾದ ಕೆಲಸಗಳನ್ನು ಮಾಡುತ್ತಿದೆ ಎಂದು ರೋಟರಿ ಜಿಲ್ಲೆ 3182 ವಲಯ 1ರ ಅಸಿಸ್ಟೆಂಟ್ ಗವರ್ನರ್ ಡಾ.ಸಂದೀಪ ಶೆಟ್ಟಿ ಹೇಳಿದರು.ಗಂಗೊಳ್ಳಿ ಸ.ವಿ. ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ಗಂಗೊಳ್ಳಿ ರೋಟರಿ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.ಗಂಗೊಳ್ಳಿ ರೋಟರಿ ಕ್ಲಬ್‍ನ ನೂತನ ಅಧ್ಯಕ್ಷ ಎಂ.ನಾಗೇಂದ್ರ ಪೈ ಅವರಿಗೆ ನಿರ್ಗಮಿತ ಅಧ್ಯಕ್ಷೆ ಸುಗುಣ ಆರ್.ಕೆ. ಮತ್ತು ನೂತನ ಕಾರ್ಯದರ್ಶಿ ಕೃಷ್ಣ ಪೂಜಾರಿ ಅವರಿಗೆ ನಿರ್ಗಮಿತ ಕಾರ್ಯದರ್ಶಿ ಚಂದ್ರಕಲಾ […]

ಡಾ.ಜೈಮಿನಿ ಪ್ರಶಾಂತ್ ಶೆಟ್ಟಿಗೆ ಸನ್ಮಾನ

ಕುಂದಾಪುರ:ರಾಷ್ಟ್ರೀಯ ವೈದ್ಯ ದಿನಾಚರಣೆ ಅಂಗವಾಗಿ ಲಯನ್ಸ್ ಕ್ಲಬ್ ನಾವುಂದ ವತಿಯಿಂದ ಡಾ.ಜೈಮಿನಿ ಪ್ರಶಾಂತ್ ಶೆಟ್ಟಿ ಮತ್ತು ದಂಪತಿಗಳನ್ನು ಸನ್ಮಾನಿಸಿ ಶುಭಹಾರೈಸಲಾಯಿತು.ಲಯನ್ಸ್ ಕ್ಲಬ್ ನಾವುಂದ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ,ಮಾಜಿ ವಲಯಾಧ್ಯಕ್ಷ ನರಸಿಂಹ ದೇವಾಡಿಗ,ಕಾರ್ಯದರ್ಶಿ ಅಶೋಕ್ ಆಚಾರ್ಯ,ದಿನೇಶ್ ಆಚಾರ್ಯ,ಸಮರ ಶೆಟ್ಟಿ,ರಾಜು.ಬಿ ದೇವಾಡಿಗ,ಶಮ್ಯ ಶೆಟ್ಟಿ ಉಪಸ್ಥಿತರಿದ್ದರು.

ಕೋಡಿ ಕನ್ಯಾಣ,ಹಂಗಾರಕಟ್ಟೆ ಬಂದರಿಗೆ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಭೇಟಿ: ಮೀನುಗಾರರ ಸಮಸ್ಯೆಗಳಿಗೆ ಸ್ಪಂದನೆ

ಕುಂದಾಪುರ:ಮೀನುಗಾರರ ಸಮಸ್ಯೆಗಳು ಹಂತ- ಹಂತಗಳಲ್ಲಿ ಬಗೆಹರಿಸುವ ಇಚ್ಛಾಶಕ್ತಿ ನಮ್ಮ ಸರಕಾರಕ್ಕಿದೆ ಎಂದು ಬಂದರು,ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಹೇಳಿದರು.ಭಾನುವಾರ ಕೋಡಿಕನ್ಯಾಣ ಮೀನುಗಾರಿಕೆ ಬಂದರು ಪ್ರದೇಶದಕ್ಕೆ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಕಡಲ್ಕೊರೆತ ಸಮಸ್ಯೆ ಕಾಸರಗೋಡಿನಿಂದ ಕಾರವಾರ- ಗೋವಾದ ತನಕ ಹಬ್ಬಿದೆ. ಇದಕ್ಕೆ ತಾತ್ಕಾಲಿಕ ಪರಿಹಾರ ಸಮಂಜಸವಲ್ಲ.ಹೀಗಾಗಿ ತಜ್ಞರ ಸಮಿತಿಯನ್ನು ನೇಮಿಸಿದ್ದು ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲಾಗುತ್ತಿದೆ,ತಾತ್ಕಾಲಿಕ ಪರಿಹಾರ ಬೇಕಾದಲ್ಲಿ ವಿಮರ್ಶೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು.ಕೋಡಿ ಕನ್ಯಾಣ,ಹಂಗಾರಕಟ್ಟೆ, ಬೆಂಗ್ರೆ ಮೀನುಗಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇವರ ದುಃಸ್ಥಿತಿ […]

You cannot copy content of this page