ರಾಘು ಟ್ರೋಫಿ-2025 ಉದ್ಘಾಟನೆ:ಯುವ ಮನಸ್ಸುಗಳು ಒಂದೇಡೆ ಸೇರಲು ಒಳ್ಳೆ ಅವಕಾಶ-ಶಾಸಕ ಗಂಟಿಹೊಳೆ ಅಭಿಮತ
ಉದ್ಯಮಿ ಚಿತ್ತರಂಜನ್ ಹೆಗ್ಡೆ ಹರ್ಕೂರು ಅವರು ಮಾತನಾಡಿ,ಕ್ರೀಡೆ ಯಿಂದ ದೇಹವನ್ನು ದಂಡಿಸಲು ಒಳ್ಳೆ ಮಾರ್ಗವಾಗಿದೆ ಎಂದು ಅಭಿಪ್ರಾಯಪಟ್ಟರು. ಕುಂದಾಪುರ:ಕ್ರಿಕೆಟ್ ಪಂದ್ಯಾಕೂಟಗಳನ್ನು ಆಯೋಜನೆ ಮಾಡುವುದರಿಂದ ಯುವ ಮನಸ್ಸುಗಳು ಒಂದೇಡೆ ಸೇರುವಂತೆ ಮಾಡಲು ಅವಕಾಶವನ್ನು ಮಾಡಿಕೊಟ್ಟಂತೆ ಆಗುತ್ತದೆ.ಜತೆಯಲ್ಲಿ ಸಂಘಟನಾತ್ಮಕವಾಗಿ ತೊಡಗಿಸಿಕೊಂಡು ಕೆಲಸ ಮಾಡಲು ಒಳ್ಳೆ ವೇದಿಕೆ ಆಗಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟುಹೊಳೆ ಹೇಳಿದರು.ಅಂಬಾ ಕ್ರಿಕೆಟರ್ಸ್ ಮುಳ್ಳಿಕಟ್ಟೆ ಹೊಸಾಡು ವತಿಯಿಂದ ಸೀತಾರಾಮ ಶೆಟ್ಟಿ ಕೇರಿಕೊಡ್ಲು ಅವರ ಸ್ಮರಣಾರ್ಥವಾಗಿ ಮುಳ್ಳಿಕಟ್ಟೆಯಲ್ಲಿ ಶನಿವಾರ ನಡೆದ ರಾಘು ಟ್ರೋಫಿ-2025 ಉದ್ಘಾಟನಾ ಕಾರ್ಯಕ್ರಮದಲ್ಲಿ […]