ಹಕ್ಲಾಡಿ:ಅಕ್ಷರ ಮಂಟಪ,ದಿ.ಬಾಳೆಮನೆ ಭಾಸ್ಕರ ಶೆಟ್ಟಿ ರಂಗವೇದಿಕೆ ಲೋಕಾರ್ಪಣೆ
ಕುಂದಾಪುರ:ಬೈಂದೂರು ವಲಯದ ಹಕ್ಲಾಡಿ ಕೆ.ಎಸ್.ಎಸ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಸರಕಾರಿ ಪ್ರೌಢಶಾಲೆಯಲ್ಲಿ ದಿ.ಬಾಳೆಮನೆ ಭಾಸ್ಕರ ಶೆಟ್ಟಿ ರಂಗವೇದಿಕೆ ಲೋಕಾರ್ಪಣೆ,ಅಕ್ಷರ ಮಂಟಪ ಸಭಾಂಗಣ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಶನಿವಾರ ನಡೆಯಿತು. ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು ಅಕ್ಷರ ಮಂಟಪ ಹಿರಿಯ ವಿದ್ಯಾರ್ಥಿ ಸಭಾಂಗಣ ಉದ್ಘಾಟಿಸಿ ಮಾತನಾಡಿ,ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸುಸಜ್ಜಿತವಾದ ಅಕ್ಷರ ಮಂಟಪ ನಿರ್ಮಾಣ ಮಾಡಿರುವುದು ಶ್ಲಾಘನೀಯ ಕೆಲಸವಾಗಿದೆ.ನಮ್ಮಲ್ಲಿ ಸಾಮಾಜಿಕ ಕಳಕಳಿ ಜಾಗ್ರತವಾದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು […]