ಅರಾಟೆ:ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಕುಂದಾಪುರ:ಬೈಂದೂರು ವಲಯದ ಸರಕಾರಿ ಕಿರಿಯ ಪ್ರಾಥಮಿಕ ಅರಾಟೆ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮ ದೀಕ್ಷಾ ಯೂತ್ ಕ್ಲಬ್ ಮತ್ತು ರಿಂಗ್ ಫ್ರೆಂಡ್ಸ್ ಸಹಭಾಗಿತ್ವದಲ್ಲಿ ಸೋಮವಾರ ನಡೆಯಿತು.ಡಾ.ಉಮೇಶ್ ಪುತ್ರನ್,ಹೊಸಾಡು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ,ಮಂಜುನಾಥ ಅರಾಟೆ,ಎಂ.ಎಂ ಸುವರ್ಣ,ಅನಿಲ್ ಮೆಂಡನ್,ವಿಜಯ್ ಪುತ್ರನ್,ಸುಮಾ,ಮಾಲತಿ ಆಚಾರ್ಯ,ಅರುಣ್ ಆಚಾರ್ಯ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸ್ಥಳೀಯ ವಿದ್ಯಾರ್ಥಿಗಳಾದ ಆರಾಧ್ಯ.ಆರ್ ಮತ್ತು ಲಕ್ಷ ರಾಜೇಶ್ ಅವರನ್ನು ಸನ್ಮಾನಿಸಲಾಯಿತು.

ಮಾರಣಕಟ್ಟೆ ಜಾತ್ರೆ,ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ಅನ್ನದಾನ ಸೇವೆ ಸಮರ್ಪಣೆ

ಕುಂದಾಪುರ:ತಾಲೂಕಿನ ಪ್ರಸಿದ್ಧ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸಾನಿಧ್ಯದಲ್ಲಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಸಂಭ್ರಮಾಚರಣೆ ಯಿಂದ ನಡೆಯಿತು.ಕಳೆದ 11 ವರ್ಷದಿಂದ ಅನ್ನದಾನ ಸೇವೆಯನ್ನು ನಡೆಸಿಕೊಂಡು ಬರುತ್ತಿರುವ ಶ್ರೀಮತಿ ನಾಗಲಕ್ಷ್ಮಿ ಸತೀಶ್ ಕೊಠಾರಿ ಕೃಷ್ಣಿಮನೆ ನಾಯ್ಕನಕಟ್ಟೆ ಅವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ಅನ್ನದಾನ ಸೇವೆಯನ್ನು ಸಮರ್ಪಿಸಿದರು.ಸಾವಿರಾರು ಮಂದಿ ಅನ್ನ ಪ್ರಸಾದವನ್ನು ಸ್ವೀಕರಿಸಿದರು. ಅನ್ನ ದಾನಿಗಳಾದ ಉದ್ಯಮಿ ಸತೀಶ್ ಕೊಠಾರಿ ಅವರು ಮಾತನಾಡಿ,ವೈವಾಹಿಕ ಜೀವನದಲ್ಲಿ ಸಂತಾನ ಭಾಗ್ಯ ಇಲ್ಲದ ಸಂದರ್ಭದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ […]

ಶೃಂಗೇರಿ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ

ಕುಂದಾಪುರ:ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ವಾರ್ಷಿಕ ವಧರ್ಂತ್ಯುತ್ಸವ ಮತ್ತು ಪರಮಪೂಜ್ಯ ದಕ್ಷಿಣಾಮ್ನಾಯ ಶೃಂಗೇರಿ ಶಾರದ ಪೀಠಾಧೀಶ್ವರರಾದ ಶ್ರೀ ಜಗದ್ಗುರು ವಿಧುಶೇಖರ ಭಾರತೀ ಸ್ವಾಮಿಗಳವರ ಅಡ್ಡ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.ಪರಮಪೂಜ್ಯ ದಕ್ಷಿಣಾಮ್ನಾಯ ಶೃಂಗೇರಿ ಶಾರದ ಪೀಠಾಧೀಶ್ವರರಾದ ಶ್ರೀ ಜಗದ್ಗುರು ವಿಧುಶೇಖರ ಭಾರತೀ ಸ್ವಾಮಿಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿಕೊಳ್ಳಲಾಯಿತು.ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ ನಗರ ಮಹಾಂಕಾಳಿ ದೇವಸ್ಥಾನದಿಂದ ಬಂದರಿನ ಬಸ್ ನಿಲ್ದಾಣ ವರೆಗೆ ಸಾಗಿ ತದ ನಂತರ ಗಂಗೊಳ್ಳಿ ರಾಜ ಬೀದಿಯ ಮೂಲಕ ಶ್ರೀಮಹಾಂಕಾಳಿ […]

You cannot copy content of this page