ನಾಗಬನದ ನಾಗಪ್ಪನ ಮಹಿಮೆ ಧ್ವನಿ ಸುರುಳಿ ಬಿಡುಗಡೆ,ಪತ್ರಿಭಾ ಪುರಸ್ಕಾರ ವಿತರಣೆ

ಕುಂದಾಪುರ:ತಾಲೂಕಿನ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಹೊಸಾಡು ಗ್ರಾಮದ ಅರಾಟೆ ಒಳನಾಡು ಶ್ರೀಸ್ವಾಮಿಲಿಂಗ ಮತ್ತು ಸಪರಿವಾರ ದೈವಗಳ ಮಹಿಮೆ ಕುರಿತು ಸದಾಶಿವ ಎನ್ ಮೊಗವೀರ ಅವರ ರಚನೆಯಲ್ಲಿ ಮೂಡಿ ಬಂದಿರುವ ನಾಗಬನದ ನಾಗಪ್ಪನ ಮಹಿಮೆ ಮಹಿಮೆ ಎಂಬ ವಿಶೇಷವಾದ ಧ್ವನಿ ಸುರುಳಿಯನ್ನು ದೈವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅದ್ಧೂರಿಯಾಗಿ ಮಂಗಳವಾರ ಬಿಡುಗಡೆ ಮಾಡಲಾಯಿತು.ಶ್ರೀ ಸ್ವಾಮಿಲಿಂಗ ಮತ್ತು ಪರಿವಾರ ದೈವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ನೃತ್ಯ ವೈಭವ,ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ […]

ನಾವುಂದ:ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

ಕುಂದಾಪುರ:ಕರ್ನಾಟಕ ಸರಕಾರ,ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಲಯನ್ಸ್ ಕ್ಲಬ್ ನಾವುಂದ,ಗ್ರಾಮ ಪಂಚಾಯತ್ ನಾವುಂದ ಅವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಸರಕಾರಿ ಕಿರಿಯ ಪ್ರಾಥಮಿಕ ನಾವುಂದ ಕೋಯಾನಗರ ಶಾಲೆಯಲ್ಲಿ ಭಾನುವಾರ ನಡೆಯಿತು.ನಾವುಂದ ಗ್ರಾ.ಪಂ ಅಧ್ಯಕ್ಷ ನರಸಿಂಹ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು,ಲಯನ್ಸ್ ವಲಯಾಧ್ಯಕ್ಷ ಜಗದೀಶ ಶೆಟ್ಟಿ ಕುದ್ರುಕೋಡು ಉದ್ಘಾಟಿಸಿದರು.ನಾವುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಮತ್ತು ಉಪಾಧ್ಯಕ್ಷ ಸಮರ ಶೆಟ್ಟಿ,ಡಾ.ಅಕ್ಷತಾ,ಸಿ.ಎಚ್.ಒ ಅಶ್ವಿನಿ ಉಪಸ್ಥಿತರಿದ್ದರು.ಅಶೋಕ ವಿ ಆಚಾರ್ಯ ಸ್ವಾಗತಿಸಿದರು.ಶಿಕ್ಷಕ ಸುನಿಲ್ […]

ಗಂಗೊಳ್ಳಿ:ಮೀನುಗಾರರ ಮೇಲಿನ ಹಲ್ಲೆ ಖಂಡನೀಯ

ಕುಂದಾಪುರ:ಕಾಸರಕೋಡು ಟೊಂಕಾದಲ್ಲಿ ಅಮಾಯಕ ಬಡ ಮೀನುಗಾರರ ಮೇಲೆ ನಡೆಸಿದ ದೌರ್ಜನ್ಯದ ಪ್ರಕರಣಕ್ಕೆ ಸಮಬಂಧಿಸಿದಂತೆ ಗಂಗೊಳ್ಳಿ ಶ್ರೀಮಹಾಂಕಾಳಿ ದೇವಸ್ಥಾನದ ಆಡಳಿತ ಮಂಡಳಿ ಸಮಿತಿ ಖಂಡಿಸುವುದರ ಮೂಲಕ ಖಂಡನಾ ನಿರ್ಣಯವನ್ನು ಕೈಗೊಂಡಿದೆ.ಮೀನುಗಾರರನ್ನು ಶೀಘೃ ಬಂಧಮುಕ್ತಗೊಳಿಸಿ ಅವರ ಮೇಲಿನ ಪ್ರಕರಣವನ್ನು ತೆರವು ಮಾಡುವಂತೆ ಆಗ್ರಹಿಸಿದೆ.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಮೀನುಗಾರರ ಮುಖಂಡರು,ಸ್ಥಳೀಯ ಮೀನುಗಾರರು ಉಪಸ್ಥಿತರಿದ್ದರು.

You cannot copy content of this page