ಬಂಜರು ಭೂಮಿಗೆ ಜೀವ ತುಂಬುತ್ತಿರುವ ಪ್ರಗತಿಪರ ಕೃಷಿಕ ಸುಬ್ಬಣ್ಣ ಶೆಟ್ಟಿ ಕಿರಿಮಂಜೇಶ್ವರ
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ನಿವಾಸಿಯಾಗಿರುವ ಸುಬ್ಬಣ್ಣ ಶೆಟ್ಟಿ ಅವರು ಕಳೆದ 35 ವರ್ಷಗಳಿಂದ ಕೃಷಿ ಚಟುವಟಿಕೆ ಕಾರ್ಯದಲ್ಲಿ ತೊಡಗಿಕೊಳ್ಳುವುದರ ಮೂಲಕ ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.ತನ್ನ 17ನೇ ವಯಸ್ಸಿನಲ್ಲಿಯೇ ತಂದೆಯವರ ಜೊತೆ ಗದ್ದೆ ಕೆಲಸದಲ್ಲಿ ತೊಡಗಿಕೊಂಡಿರುವ ಅವರು ಕೃಷಿ ಕಾಯಕವನ್ನೆ ತನ್ನ ಮೂಲ ಉದ್ಯೋಗವನ್ನಾಗಿ ಮಾಡಿಕೊಂಡು ಕುಟುಂಬದ ಜತೆ ಸಂತೃಪ್ತಿಯಾದ ಜೀವನವನ್ನು ನಡೆಸುತ್ತಿದ್ದಾರೆ.ಕೃಷಿಯಲ್ಲಿ ಅಗಾಧವಾದ ಜ್ಞಾನವನ್ನು ಹೊಂದಿರುವ ಸುಬ್ಬಣ್ಣ ಶೆಟ್ಟಿ ಅವರು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಲ್ಲಿ ನಿಸ್ಸಿಮ್ಮರು. ಹಡವು ಬಿದ್ದ ಭೂಮಿಗೆ ಚೈತನ್ಯ ನೀಡುವ ದೃಷ್ಟಿಯಿಂದ […]