ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ ಮಂಗಳೂರು:ನೂತನ ಮನೆ ಕೀಲಿಕೈ ಹಸ್ತಾಂತರ
ಮಂಗಳೂರು:ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ (ರಿ) ಮಂಗಳೂರು ಪಟ್ಲ ಯಕ್ಷಾಶ್ರಯ ಯೋಜನೆಯಡಿಯಲ್ಲಿ ವಿಟ್ಲ ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರೀ ದೇವಸ್ಥಾನದ ಹತ್ತಿರದಲ್ಲಿ ನಿರ್ಮಾಣಗೊಂಡಿರುವ “ಶ್ರೀದೇವಿ ನಿಲಯ” ನೂತನ ಮನೆಯ ಕೀಲಿಕೈಯನ್ನು ಹನುಮ ಗಿರಿಮೇಳದ ಕಲಾವಿದ ಶ್ರೀ ರೂಪೇಶ್ ಆಚಾರ್ಯ ಅವರಿಗೆ ಭಾನುವಾರ ಹಸ್ತಾಂತರ ಮಾಡಲಾಯಿತು.ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಹಾಗೂ ನೂತನ ಮನೆಯ ನಿರ್ಮಾಣಕ್ಕೆ ಕಾರಣೀಕರ್ತರಾದ ದಾನಿಗಳಾದ ಅಶೋಕ್ ಶೆಟ್ಟಿ ಬೆಳ್ಳಾಡಿ ಅವರು ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಿ ಶುಭಹಾರೈಸಿದರು.ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ವಿಟ್ಲ ಘಟಕದ ಪ್ರಧಾನ […]