ಗಂಗೊಳ್ಳಿ:ಮೀನುಗಾರರ ಮೇಲಿನ ಹಲ್ಲೆ ಖಂಡನೀಯ

ಕುಂದಾಪುರ:ಕಾಸರಕೋಡು ಟೊಂಕಾದಲ್ಲಿ ಅಮಾಯಕ ಬಡ ಮೀನುಗಾರರ ಮೇಲೆ ನಡೆಸಿದ ದೌರ್ಜನ್ಯದ ಪ್ರಕರಣಕ್ಕೆ ಸಮಬಂಧಿಸಿದಂತೆ ಗಂಗೊಳ್ಳಿ ಶ್ರೀಮಹಾಂಕಾಳಿ ದೇವಸ್ಥಾನದ ಆಡಳಿತ ಮಂಡಳಿ ಸಮಿತಿ ಖಂಡಿಸುವುದರ ಮೂಲಕ ಖಂಡನಾ ನಿರ್ಣಯವನ್ನು ಕೈಗೊಂಡಿದೆ.ಮೀನುಗಾರರನ್ನು ಶೀಘೃ ಬಂಧಮುಕ್ತಗೊಳಿಸಿ ಅವರ ಮೇಲಿನ ಪ್ರಕರಣವನ್ನು ತೆರವು ಮಾಡುವಂತೆ ಆಗ್ರಹಿಸಿದೆ.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಮೀನುಗಾರರ ಮುಖಂಡರು,ಸ್ಥಳೀಯ ಮೀನುಗಾರರು ಉಪಸ್ಥಿತರಿದ್ದರು.

ಹೆಜ್ಜೇನು ಗೂಡಿಗೆ ಹಿಟ್ ಆದ ಚೆಂಡು,ಆಟಗಾರರು ಕಂಗಾಲು

ಮಂಗಳೂರು:ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದಾಗ ಬ್ಯಾಟ್ಸ್‌ಮನ್ ಹೊಡೆದ ಚೆಂಡು ತೆಂಗಿನ ಮರದಲ್ಲಿದ್ದ ಹೆಜ್ಜೇನು ಗೂಡಿಗೆ ಬಡಿದ ಪರಿಣಾಮ ಜೇನು ಹುಳಗಳು ಗುಂಪಾಗಿ ದಾಳಿಯಿಟ್ಟ ಘಟನೆ ಉಳ್ಳಾಲ ಒಂಭತ್ತುಕೆರೆಯಲ್ಲಿ ನಡೆದಿದೆ.ಹೆಜ್ಜೇನು ದಾಳಿಯಿಂದ ಕಂಗಾಲಾದ ಕ್ರಿಕೆಟ್ ಆಟಗಾರರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ.ಭಾನುವಾರ ಒಂಬತ್ತುಕೆರೆಯ అనిల ಕಂಪೌಂಡ್ ಮೈದಾನದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದ ಸಂದರ್ಭ ಆಟಗಾರರೊಬ್ಬರು ಹೊಡೆದ ಚೆಂಡು ನೇರವಾಗಿ ಹೆಜ್ಜೇನು ಗೂಡು ಕಟ್ಟಿದ್ದ ತೆಂಗಿನ ಮರಕ್ಕೆ ತಾಗಿದೆ.ಪರಿಣಾಮ ಕ್ರಿಕೆಟ್ ಮೈದಾನಕ್ಕೆ ದಾಳಿ ಇಟ್ಟ ಹೆಜ್ಜೇನು ನೊಣಗಳು ಆಟಗಾರರ ಮೇಲೆ ದಾಳಿ […]

ತ್ರಾಸಿ:ಅಪರಿಚಿತ ಗಂಡಸಿನ ಶವ ಪತ್ತೆ

ಕುಂದಾಪುರ:ತಾಲೂಕಿನ ತ್ರಾಸಿ ಗ್ರಾಮದ ಕಂಚುಗೋಡು ಸಮೀಪ ಕಡಲ ತೀರದ ಬಳಿ ಅಂದಾಜು 50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಭಾನುವಾರ ಪತ್ತೆಯಾಗಿದೆ.ಗಂಗೊಳ್ಳಿ ಠಾಣೆ ಪಿಎಸ್‍ಐ ಗುಪ್ತಚರ ವಿಭಾಗ ಬಸವ ಕನಟ್ಟಿ,ಕರಾವಳಿ ನಿಯಂತ್ರಣ ದಳ ಸಿಬ್ಬಂದಿ ನಿಶಾಂತ ಖಾರ್ವಿ,ಹೆಡ್ ಕಾನ್ಸ್ಟೇಬಲ್ ನಾಗರಾಜ ನಾಯಕವಾಡಿ,ಮಾಳಿಂಗರಾಯ ಸ್ಥಳದಲ್ಲಿ ಹಾಜರಿದ್ದರು.ಆಪತ್ಭಾಂದವ ಇಬ್ರಾಹಿಂ ಗಂಗೊಳ್ಳಿ,ಕೃಷ್ಣ,ಕಿಟ್ಟ,ಅಕ್ಷಯ್ ಖಾರ್ವಿ ಅವರು ಶವವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.

You cannot copy content of this page