ಶ್ರೀ ಈಶ್ವರಯ್ಯ ನಂದಿಕೇಶ್ವರ ಸಪರಿವಾರ ದೈವಸ್ಥಾನ ಕೊಳೂರು ವಾರ್ಷಿಕ ಹಾಲು ಹಬ್ಬ ಸೇವೆ,ಪ್ರತಿಷ್ಠಾ ಮಹೋತ್ಸವ
ಕುಂದಾಪುರ:ತಾಲೂಕಿನ ಕುಂದಬಾರಂದಾಡಿ ಗ್ರಾಮದ ಕೊಳೂರು ಶ್ರೀ ಈಶ್ವರಯ್ಯ ನಂದಿಕೇಶ್ವರ ಸಪರಿವಾರ ದೈವಸ್ಥಾನದಲ್ಲಿ ವಾರ್ಷಿಕ ಹಾಲು ಹಬ್ಬ ಸೇವೆ,ಕಲಾಹೋಮ,ಗೆಂಡ ಸೇವೆ ಹಾಗೂ ಏಳನೇ ವರ್ಷದ ವಾರ್ಷಿಕ ಮಹೋತ್ಸವ ಕಾರ್ಯಕ್ರ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಬುಧವಾರ ನಡೆಯಿತು.ವಾರ್ಷಿಕ ಉತ್ಸವದ ಅಂಗವಾಗಿ ಶ್ರೀ ದೇವರಿಗೆ ಶ್ರೀ ಈಶ್ವರಯ್ಯ ನಂದಿಕೇಶ್ವರ ಪರಿವಾರ ದೈವಗಳಿಗೆ ಹಣ್ಣುಕಾಯಿ,ಮಂಗಳಾರತಿ ಸೇವೆ,ಗೆಂಡ ಸೇವೆ ಹಾಗೂ ಅನ್ನದಾನ ಸೇವೆಯನ್ನು ಸಲ್ಲಿಸಲಾಯಿತು.ಭಕ್ತರು ಕ್ಷೇತ್ರಕ್ಕೆ ಆಗಮಿಸಿ ತಮ್ಮ ಹರಕೆಯನ್ನು ಸಲ್ಲಿಸಿದರು.ಕೊಳೂರು ದೈವದಮನೆ ಫ್ರೆಂಡ್ಸ್ ಸಹಯೋಗದೊಂದಿಗೆ ನಾಟಕ ಪ್ರದರ್ಶನ ಜರುಗಿತು.ಅಶೋಕ ಶೆಟ್ಟಿ ಹೊಸೂರು […]