ಹಟ್ಟಿಯಂಗಡಿ:ಧಾರ್ಮಿಕ ಸಭಾ ಕಾರ್ಯಕ್ರಮ ಮಹಾ ಅನ್ನಸಂತರ್ಪಣೆ
ಕುಂದಾಪುರ:ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಇದರ ನೂತನ ದೇವಾಲಯ ಲೋಕಾರ್ಪಣೆ ಬ್ರಹ್ಮಕಲಶೋತ್ಸವ ,ಲಕ್ಷ ಮೋದಕ ಹವನ,ಶತ ಚಂಡಿಯಾಗ,2016 ಕಾಯಿ ಗಣಹೋಮ ಕಾರ್ಯಕ್ರಮದ ಅಂಗವಾಗಿ ಬುಧವಾರ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.ಧಾರ್ಮಿಕ ಸಭಾ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಆಶೀರ್ವಚನ ನೀಡಿ ಮಾತನಾಡಿ,ಕಾರವಳಿಯಲ್ಲಿರುವ ಅನೇಕ ಸನ್ನಿಧಾನಗಳು ಭಕ್ತರಿಗೆ ಭಕ್ತಿಯ ಸಿಂಚನವನ್ನು ಮಾಡುತ್ತಿವೆ.ನಮ್ಮ ಅನೇಕ ಸಿದ್ಧಾಂತಗಳು ಆಸ್ತಿಕ ಮನೋಭಾವನೆಗಳನ್ನು ಮೂಡಿಸುತ್ತವೆ.ನಾವು ಧರ್ಮ ಮಾರ್ಗ ದಿಂದ ನಡೆದರೆ […]



























































































































































































































































































































































































































































































































































































































































































































































































































































































































































































































































































































































































































































































































































































































































































