ತೆಂಗಿನ ಮರಕ್ಕೆ ತಗುಲಿದ ವಿಚಿತ್ರ ರೋಗ,ವಿಜ್ಞಾನಿಗಳ ತಂಡ ಭೇಟಿ

ಕುಂದಾಪುರ:ತಾಲೂಕಿನ ಹೆಮ್ಮಾಡಿ ಗ್ರಾಮದ ಕನ್ನಡ ಕುದ್ರು ಹಾಗೂ ಮುವತ್ತುಮುಡಿ ಭಾಗದಲ್ಲಿ ತೆಂಗಿನ ಮರಕ್ಕೆ ತಗುಲಿದ ವಿಚಿತ್ರ ರೋಗ ಬಾಧೆಯನ್ನು ಅಧ್ಯಾಯನವನ್ನು ಮಾಡಲು ವಿಜ್ಞಾನಿಗಳ ತಂಡ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ,ತೆಂಗು ಬೆಳೆಗಾರ ರೈತರೊಂದಿಗೆ ಚರ್ಚಿಸಿದರು.ಪ್ರೆÇ.ಡಾ.ರೇವಣ್ಣ ರೇವಣ್ಣನವರ್ (ಝೆಎಹೆಚ್‍ಆರ್‍ಎಸ್),ಸಾಹಾಯಕ ಪ್ರಾಧ್ಯಾಪಕ ಡಾ.ಮೋಹನ ಕುಮಾರ್ (ಝೆಎಹೆಚ್‍ಆರ್‍ಎಸ್),ಹಿರಿಯ ಎಡಿ ತೋಟಗಾರಿಕೆ ನಿಧೀಶ ಕೆ.ಜೆ ಹಾಗೂ ರೈತರಾದ ಚಂದ್ರ ಪೂಜಾರಿ ಕನ್ನಡ ಕುದ್ರು,ಜೈಸನ್ ಪಿಂಟೊ ಉಪಸ್ಥಿತರಿದ್ದರು. ಮರಗಳಿಗೆ ತಗುಲಿದ ರೋಗವನ್ನು ಪತ್ತೆ ಹಚ್ಚಿದ ವಿಜ್ಞಾನಿಗಳ ತಂಡ ಕಪ್ಪು ತಲೆ ಗರಿತಿನ್ನುವ […]

ಶ್ರೀಮಹಾಗಣಪತಿ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮ

ಕುಂದಾಪುರ:ತಾಲೂಕಿನ ಹರ್ಕೂರು ಗ್ರಾಮದ ಶ್ರೀಮಹಾಗಣಪತಿ ದೇವಸ್ಥಾನದ ತಾಮ್ರದ ಹೊದಿಕೆಯ ನೂತನ ಶಿಲಾದೇಗುಲ ಸಮರ್ಪಣೆ ಹಾಗೂ ಶ್ರೀದೇವರ ಪುನರ್ ಪ್ರತಿಷ್ಠೆ ಅಂಗವಾಗಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುರುವಾರ ನಡೆಯಿತು.ಶ್ರೀ ಮಹಾಗಣಪತಿ ದೇವರ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಮಹಾಮಂಗಳಾರತಿ ಪೂಜೆ,ಮಹಾಪೂಜೆ,ಮಹಾ ಅನ್ನಸಂತರ್ಪಣೆ,ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಯಕ್ಷಗಾನ ಪ್ರದರ್ಶನ ಜರುಗಿತು.ನೂತನ ದೇವಾಲಯ ನಿರ್ಮಾಣಕ್ಕೆ ದಾನಿಗಳಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ಅಪ್ಪಣ್ಣ ಹೆಗ್ಡೆ ಅವರು ಧಾರ್ಮಿಕ […]

ಹರ್ಕೂರು ಶ್ರೀಮಹಾಗಣಪತಿ ದೇವರ ಪುನರ್ ಪ್ರತಿಷ್ಠೆ ಮಹೋತ್ಸವ

ಕುಂದಾಪುರ:ತಾಲೂಕಿನ ಹರ್ಕೂರು ಗ್ರಾಮದ ಶ್ರೀಮಹಾಗಣಪತಿ ದೇವರ ಅಷ್ಟಬಂಧ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ವೃಷಭ ಲಗ್ನ ಸುಮುಹೂರ್ತದಲ್ಲಿ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬುಧವಾರ ವಿಜೃಂಭಣೆಯಿಂದ ನಡೆಯಿತು.ಶ್ರೀಮಹಾಗಣಪತಿ ದೇವರ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಜೀವ ಕುಂಭಾಬಿಷೇಕ,ಪ್ರತಿಷ್ಠಾ ಕಲಶಾಭಿಷೇಕ,ಮಹಾಪೂಜೆ,ಪ್ರಾಯಶ್ಚಿತ ಹೋಮ,ಶಿಖರ ಪ್ರತಿಷ್ಠೆ,ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.ಶ್ರೀದೇವರಿಗೆ ಬೆಳ್ಳಿ ಪ್ರಭಾವಳಿ ಮತ್ತು ಬೆಳ್ಳಿ ಮುಖವಾಡವನ್ನು ಸಮರ್ಪಣೆ ಮಾಡಲಾಯಿತು.ಸಾವಿರಾರು ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಿದರು.ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.ವೇದ ಬ್ರಹ್ಮ ಹೃಷಿಕೇಶ ಬಾಯರಿ ಬಾರ್ಕೂರು ಹಾಗೂ ವೇದ ಮೂರ್ತಿ ಚನ್ನಕೇಶವ […]

You cannot copy content of this page