ಏಪ್ರಿಲ್ 23 ರಂದು ಬಗ್ವಾಡಿ ಶ್ರೀಮಹಿಷಾಸುರ ಮರ್ದಿನಿ ದೇವಿಯ ಬ್ರಹ್ಮರಥೋತ್ಸವ

ಕುಂದಾಪುರ:ತಾಲೂಕಿನ ಪ್ರಸಿದ್ಧ ಶ್ರೀಕ್ಷೇತ್ರ ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಿಯ ಬ್ರಹ್ಮ ರಥೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಏಪ್ರಿಲ್ 23 ರಂದು ಮಂಗಳವಾರ ವಿಜೃಂಭಣೆಯಿಂದ ನಡೆಯಲಿದೆ.ಶ್ರೀದೇವಿಯ ಬ್ರಹ್ಮರಥೋತ್ಸವ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ಕ್ಕೆ ಮಹಿಳೆಯರಿಂದ ಸಾಮೂಹಿಕ ಕುಂಕಮಾರ್ಚನೆ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.ಸಂಜೆ 6 ರಿಂದ ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಸಾರಥ್ಯದಲ್ಲಿ ಟೀಮ್ ಮಸ್ತ್ಯಗಂಧ ಇವರಿಂದ ಶ್ರೀರಾಮ ದರ್ಶನಂ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.ಏಪ್ರಿಲ್ 24 ರಂದು ಕುಣಿತ ಭಜನೆ:ಏಪ್ರಿಲ್ 24 ರ […]

ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ರೂಟ್ ಮಾರ್ಚ್

ಕುಂದಾಪುರ:ಲೋಕ ಸಭಾ ಕ್ಷೇತ್ರ ಚುನಾವಣೆ ಹಿನ್ನೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮತ್ತು ನಿರ್ಭಿತಿ ಯಿಂದ ಚುನಾವಣೆ ನಡೆಯಲು ಪೊಲೀಸ್ ರೂಟ್ ಮಾರ್ಚ್ ಭಾನುವಾರ ಕುಂದಾಪುರದಲ್ಲಿ ನಡೆಯಿತು.ಕುಂದಾಪುರ ಪ್ರಮುಖ ಬೀದಿಗಳಲ್ಲಿ ಪೊಲೀಸ್ ರು ಪಥಸಂಚಲನವನ್ನು ನಡೆಸಿದರು.ಗುಜರಾತ ರಾಜ್ಯದ ಮೀಸಲು ಪಡೆ ಪೊಲೀಸ್ ಇನ್‍ಸ್ಪೆಕ್ಟರ್ ಅಶೀಕ್ ವಾಸವ ಮತ್ತು ಮೂವರು ಸಬ್ ಇನ್‍ಸ್ಪೆಕ್ಟರ್ ನೇತೃತ್ವದಲ್ಲಿ ಪೊಲೀಸ್ ರೂಟ್ ಮಾರ್ಚ್ ನಡೆಯಿತು.ಬೈಂದೂರು,ಗಂಗೊಳ್ಳಿ,ಕುಂದಾಪುರ ಗ್ರಾಮೀಣ,ಕುಂದಾಪುರ,ಅಮಾವಾಸ್ಯೆ ಬೈಲು,ಶಂಕರನಾರಾಯಣ ಠಾಣೆಗಳ 50 ಕ್ಕೂ ಅಧಿಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳು,ಗುಜರಾತ ಪೊಲೀಸ್ ಸುಮಾರು 70 ಸಿಬ್ಬಂದಿಗಳು ಭಾಗವಹಿಸಿದ್ದರು.ನೆಹರು […]

ಕಾರು ಮತ್ತು ಲಾರಿ ನಡುವೆ ಅಪಘಾತ,ಐದು ಜನರಿಗೆ ಗಂಭೀರ ಗಾಯ

ಬೈಂದೂರು:ತಾಲೂಕಿನ ನಾವುಂದ ಅರೆಹೊಳೆ ಕ್ರಾಸ್‍ನಲ್ಲಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐದು ಜನರು ಗಂಭೀರ ಸ್ವರೂಪದ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ನಡೆದಿದೆ.ಕುಂದಾಪುರ ಕಡೆಯಿಂದ ಗೋಕರ್ಣ ಕಡೆಗೆ ಸಾಗುತ್ತಿದ್ದ ಕಾರು ಅದೆ ಮಾರ್ಗದಲ್ಲಿ ಬೈಂದೂರು ಕಡೆಗೆ ಸಾಗುತ್ತಿದ್ದ ಲಾರಿ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸ್ಟೇಟ್‍ಬ್ಯಾಂಕ್ ಉದ್ಯೊಗಿಗಳಾದ ಚಿಕ್ಕಮಗಳೂರಿನ ನಿವಾಸಿ ಪ್ರತಾಪ,ಪ್ರೇಮ,ಪ್ರಜ್ವಲ್ ಅಂತೋನಿ,ಸುರೇಶ ಆಂಧ್ರಪ್ರದೇಶ,ವಿಘ್ನೇಶ ಹಟ್ಟಿಕುದ್ರು ಕುಂದಾಪುರ ಅವರು ಗಂಭೀರ ಸ್ವರೂಪದ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.ಕಿರಿಮಂಜೇಶ್ವರ 108 ವಾಹನದ […]

You cannot copy content of this page