ಬಿಸಿಲಿನ ತಾಪಕ್ಕೆ ಬಸ್ ಗಾಜು ಒಡೆದು ಮೂವರಿಗೆ ಗಾಯ

ಕುಂದಾಪುರ:ಪುತ್ತೂರಿನಿಂದ ಕಾಸರಗೋಡಿಗೆ ತೆರಳುತ್ತಿದ ಕೇರಳ ರಾಜ್ಯ ಸಾರಿಗೆ ಬಸ್ ಮಲಬಾರ್ ಎಕ್ಸ್‌ಪ್ರೆಸ್‌ ನ ಗಾಜು ಒಡೆದು ಮೂವರು ಗಾಯಗೊಂಡ ಘಟನೆ ಶನಿವಾರ ಮುಸ್ಸಂಜೆ ಉರಿಮಜಲಿನಲ್ಲಿ ಸಂಭವಿಸಿದೆ.ಬಸ್ ನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಬಾಲಕರು ಹಾಗೂ ಬಸ್ ಚಾಲಕ ಗಾಯಗೊಂಡ ವರುಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಬಾಲಕ ಕಾಸರಗೋಡು ನೆಲ್ಲಿಕಟ್ಟೆಯವನು ಎನ್ನಲಾಗಿದೆಬಿಸಿಲಿನ ತಾಪಕ್ಕೆ ಗಾಜು ಒಡೆಯಿತು ಎಂದು ಹೇಳಲಾಗಿದೆ.

ಮೇ.05,06 ರಂದು ಶ್ರೀಬೊಬ್ಬರ್ಯ ಪರಿವಾರ ದೇವರ ನೂತನ ಶಿಲಾಮಯ ದೇಗುಲ ಲೋಕಾರ್ಪಣೆ,ಪುನರ್ ಪ್ರತಿಷ್ಠೆ

ಕುಂದಾಪುರ:ಬೈಂದೂರು ತಾಲೂಕಿನ ನಾಗೂರು ಕಿರಿಮಂಜೇಶ್ವರ ಗುಂಜಾನುಗುಡ್ಡೆ ಶ್ರೀ ಬೊಬ್ಬರ್ಯ ಪರಿವಾರ ದೇವರ ನೂತನ ಶಿಲಾಮಯ ದೇಗುಲ ಲೋಕಾರ್ಪಣೆ, ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮೇ.05 ಭಾನುವಾರ ಮತ್ತು ಮೇ.06 ಸೋಮವಾರ ನಡೆಯಲಿದೆ.ಶ್ರೀಬೊಬ್ಬಯ ಮತ್ತು ಪರಿವಾರ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಮೇ.05 ರ ಭಾನುವಾರ ದಂದು ಸಂಜೆ 05 ಗಂಟೆಗೆ ನೂತನ ಶಿಲಾ ವಿಗ್ರಹವನ್ನು ಪುರಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗುತ್ತದೆ.ಸಂಜೆ 06 ಕ್ಕೆ ಗುರುಗಣಪತಿ ಪೂಜೆ, ಪ್ರತಿಷ್ಠಾ ಹೋಮ […]

ಮಾಟುಬಲೆ ದೋಣಿ ಮೀನುಗಾರರ ಆಹ್ವಾನಿತ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

ಕುಂದಾಪುರ:ಕರಾವಳಿ ಮಿತ್ರ ಮಂಡಳಿ ಮರವಂತೆ ಅದರ 25ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ನಾವುಂದ ವ್ಯಾಪ್ತಿಯ ಮಾಟುಬಲೆ ದೋಣಿ ಮೀನುಗಾರರ ಆಹ್ವಾನಿತ ಕ್ರಿಕೆಟ್ ಪಂದ್ಯಾಟ ಮರವಂತೆಯಲ್ಲಿ ಶನಿವಾರ ನಡೆಯಿತು. ಶ್ರೀರಾಮ ಮಂದಿರ ಮೀನುಗಾರರ ಸೇವಾ ಸಮಿತಿ ಮರವಂತೆ ಅಧ್ಯಕ್ಷ ವಾಸುದೇವ ಖಾರ್ವಿ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಮೀನುಗಾರಿಕೆ ಜತೆಗೆ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದದ ಮನಸು ಚೇತನ್ಯ ಭರಿತವಾಗಿರುತ್ತದೆ.ಮೀನುಗಾರಿಕೆಯಲ್ಲಿ ಜೀವನವನ್ನು ಕಂಡುಕೊಂಡಿರುವ ಮೀನುಗಾರರ ಮಕ್ಕಳು ಶಿಕ್ಷಣವಂತರಾಗಿ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು. […]

You cannot copy content of this page