ಶಿರೂರು:ಪ್ರೌಢಶಾಲೆ ವಿದ್ಯಾರ್ಥಿ ಆತ್ಮಹತ್ಯೆ

ಬೈಂದೂರು:ವರ್ಗಾವಣೆ ಪ್ರಮಾಣಪತ್ರ (ಟಿಸಿ) ನೀಡಲು ವಿಳಂಬ ಮಾಡಿದರು ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಮೇಲ್ಪಂಕ್ತಿ ಎಂಬಲ್ಲಿ ನಡೆದಿದೆ.ನಿತಿನ್ ಆಚಾರ್ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.ಈತ ಬೈಂದೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಯಾಗಿದ್ದು ಪ್ರಸ್ತುತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ಸೋಮವಾರ ಸಂಸ್ಥೆಗೆ ವರ್ಗಾವಣೆ ಪತ್ರ ಪಡೆಯಲು ಹೋದ ವೇಳೆ ಅಲ್ಲಿ ಶಿಕ್ಷಕರು ಬೈದಿದ್ದಾರೆ ಎಂಬ ಕಾರಣಕ್ಕೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೆತ್ತವರು ದೂರು ನೀಡಿದ್ದಾರೆ. […]

ಯೋಗ ತರಬೇತಿ ಸಮಾರೋಪ ಸಮಾರಂಭ

ಕುಂದಾಪುರ:ಜೋಗಿ ಮನೆ ಟ್ರಸ್ಟ್ ಹಳಗೇರಿ ತಂಕಬೆಟ್ಟು ,ಜೆ.ಸಿ.ಐ.ಉಪ್ಪುಂದ ಹಾಗೂ ಆಯುಷ್ಮಾನ್ ಆರೋಗ್ಯ ಮಂದಿರ (ಆಯುಷ್) ಸರಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು ಅವರ ಸಂಯುಕ್ತ ಆಶ್ರಯದಲ್ಲಿ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ 10 ದಿನಗಳ ಉಚಿತ ಯೋಗ ತರಬೇತಿಯ ಸಮಾರೋಪ ಸಮಾರಂಭ ಹಳಗೇರಿ ಜೋಗಿ ಮನೆ ವಠಾರದಲ್ಲಿ ನಡೆಯಿತು.ಸಿದ್ಧಪೀಠ ಕೊಡಾಚಾದ್ರಿ ಪ್ರಧಾನ ಕಾರ್ಯದರ್ಶಿಡಾ.ಕೇಶವ ಕೋಟೇಶ್ವರ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ.ಯೋಗ ತರಬೇತಿ ಶಿಬಿರದಂತಹ ಕಾರ್ಯಕ್ರಮಗಳು ಎಲ್ಲಾ ಪರಿಸರದಲ್ಲಿ ನಡೆಯಬೇಕು.ಸಮಾಜ ಸೇವೆ ಮಾಡುವಂತಹ […]

ಊರಾಗ್ ಒಂದ ಕಾರ್ ಹಬ್ಬ ಕಾರ್ಯಕ್ರಮ ಉದ್ಘಾಟನೆ

ಕುಂದಾಪುರ:ಯುನೆಟೈಡ್ ಟೊಯೋಟ ಕಂಪೆನಿ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಊರಾಗ್ ಒಂದ ಕಾರ್ ಹಬ್ಬ ಎನ್ನುವ ವಿನೂತ ಕಾರ್ಯಕ್ರಮವನ್ನು ಬಸ್ರೂರು ಜಂಕ್ಷನ್‍ನಲ್ಲಿ ಸೋಮವಾರ ಉದ್ಘಾಟಿಸಲಾಯಿತು.ಊರಾಗ್ ಒಂದ ಕಾರ್ ಹಬ್ಬದ ಪ್ರಯುಕ್ತ ಟೊಯೋಟ ಕಂಪೆನಿಯ ವಿವಿಧ ಬಗೆಯ ಕಾರ್‍ಗಳನ್ನು ಪ್ರದರ್ಶನಕ್ಕೆ ಇಡಲಾಯಿತು.ದುಬಾರಿ ಬೆಲೆಯ ಕಾರ್‍ಗಳನ್ನು ನೋಡಿ ಜನರು ಖುಷಿಪಟ್ಟರು.ಗ್ರಾಹಕರು ಕಾರ್ ಹಬ್ಬದಲ್ಲಿ ಭಾಗವಹಿಸಿ ಟೊಯೋಟ ಸಿಬ್ಬಂದಿಗಳಿಂದ ಮಾಹಿತಿಯನ್ನು ಪಡೆದುಕೊಂಡು.ಹೊಸ ಕಾರ್ ಖರೀದಿಗೆ ಬುಕ್ಕಿಂಗ್ ಕೂಡ ಮಾಡಿದರು.ಗ್ರಾಹಕರಿಗೆ ಟೆಸ್ಟ್ ಡ್ರೈ ವ್ಯವಸ್ಥೆಯನ್ನು ಕೂಡ ಅಚ್ಚುಕಟ್ಟಾಗಿ ಮಾಡಲಾಯಿತು.ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ […]

You cannot copy content of this page