ಶವ ಸಂರಕ್ಷಕ ನೂತನ ಫ್ರೀಜರ್ ಕೊಡುಗೆ

ಕುಂದಾಪುರ:ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ವತಿಯಿಂದ ಗಂಗೊಳ್ಳಿ ಶ್ರೀ ವೀರೇಶ್ವರ ಸೇವಾ ಟ್ರಸ್ಟ್‍ಗೆ ಶವ ಸಂರಕ್ಷಕ ನೂತನ ಫ್ರೀಜರ್‍ನ್ನು ಕೊಡುಗೆಯಾಗಿ ಶುಕ್ರವಾರ ನೀಡಲಾಯಿತು.ಶ್ರೀ ವಿರೇಶ್ವರ ದೇವಸ್ಥಾನದ ಅರ್ಚಕ ರವೀಶ್ ಭಟ್ ಅವರು ಧಾರ್ಮಿಕ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಹಿಂಜಾವೇ ಮುಖಂಡ ವಾಸುದೇವ ಗಂಗೊಳ್ಳಿ,ಯಶವಂತ ಗಂಗೊಳ್ಳಿ,ನವೀನ್ ಗಂಗೊಳ್ಳಿ,ಟ್ರಸ್ಟ್ ಅಧ್ಯಕ್ಷ ಅಕ್ಷಯ್ ಹಾಗೂ ಕಾರ್ತಿಕ್,ಪ್ರೀತೇಶ್,ಮೋಹನ್,ಮಹೇಶ್ ದಾಕಹಿತ್ಲು ಉಪಸ್ಥಿತರಿದ್ದರು.ಶ್ರೀ ವೀರೇಸ್ವರ ಸೇವಾ ಟ್ರಸ್ಟ್ ಗಂಗೊಳ್ಳಿ ನಿರ್ವಹಣೆ ಮಾಡಲಿದೆ.ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಸಾಮಾಜಿಕ ನಡೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಎಂಟು ವರ್ಷದ ಬಳಿಕ ತವರಿಗೆ ಮರಳಿದ ಜಿಂಕು

ಉಡುಪಿ:ಕಳೆದ ನಾಲ್ಕು ತಿಂಗಳ ಹಿಂದೆ ಕುಂದಾಪುರ ತಾಲೂಕಿನ ತ್ರಾಸಿ,ಮುಳ್ಳಿಕಟ್ಟೆ ಪರಿಸರದಲ್ಲಿ ಅಡ್ಡಾಡುತ್ತಿದ್ದ ಉತ್ತರ ಪ್ರದೇಶದ ಮೆಹದಾವಲ್ ಜಿಲ್ಲೆ ನಿವಾಸಿ ಮಾನಸಿಕ ಅಸ್ವಸ್ಥ ಜಿಂಕು (ಸುನಿಲ್) ಎಂಬಾತ ಯುವಕ ಮಂಜೇಶ್ವರ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖ ಗೊಂಡು ಎಂಟು ವರ್ಷದ ಬಳಿಕ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾನೆ.ಘಟನೆ ವಿವರ:ಜನವರಿ.25 ರಂದು ತ್ರಾಸಿ ಬೀಚ್ ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ ಕೈಯಲ್ಲಿ ಒಂದು ಚೀಲ ಹಿಡಿದುಕೊಂಡು ಹರಿದ ಬಟ್ಟೆ ಧರಿಸಿದ ಮಾನಸಿಕ ಅಸ್ವಸ್ಥನೊಬ್ಬನು ನಡೆದು ಕೊಂಡು […]

ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಗೆ 78.84 ಫಲಿತಾಂಶ

ಕುಂದಾಪುರ:ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ (ಕನ್ನಡ ಮಾಧ್ಯಮ ಗಂಗೊಳ್ಳಿ 2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 78.84 ಫಲಿತಾಶ ಗಳಿಸಿದೆ.ಶಾಲೆಯ ವಿದ್ಯಾರ್ಥಿಗಳಾದ ಶ್ರಾವ್ಯ 586 ಅಂಕ,ಚಂದನಾ 569 ಅಂಕ,ಬಿ.ಶೈಲೇಶ್ 546 ಅಂಕ ಹಾಗೂ ಸಿಂಚನಾ 536 ಅಂಕ,ಐಶೂ 533 ಅಂಕ,ಲೇಖಾ 516 ಅಂಕ ಗಳಿಸಿದ್ದಾರೆ.

You cannot copy content of this page