ವಿದ್ಯಾ ಪೋಷಕ್ ಮನೆ ಹಸ್ತಾಂತರ

ಕುಂದಾಪುರ:ಯಕ್ಷಗಾನ ಕಲಾರಂಗ ಉಡುಪಿ,ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‍ಮೆಂಟ್,ಟ್ರೈನಿಂಗ್ ಆ್ಯಂಡ್ ರಿಸರ್ಚ್ ಸೆಂಟರ್,ಯಕ್ಷನಿಧಿ,ವಿದ್ಯಾ ಪೋಷಕ್ ಮನೆ ಹಸ್ತಾಂತರ ,ಯಕ್ಷಶಿಕ್ಷಣ ಹಾಗೂ ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ ಅವರ ಪ್ರಾಯೋಜಕತ್ವದಲ್ಲಿ ದಾನಿಗಳ ನೆರವಿನಿಂದ ಹೆಮ್ಮಾಡಿ ಗ್ರಾಮದ ಕಟ್ಟು ಎಂಬಲ್ಲಿ ನಿರ್ಮಿಸಿದ ನೂತನೆ ಮನೆ ಸರಸ್ವತಿ ನಿಲಯ ಅದರ ಹಸ್ತಾಂತ ಕಾರ್ಯಕ್ರಮ ಗುರುವಾರ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಜ್ಯೋತಿ ಬೆಳಗಿಸುವುದರ ಮುಖೇನ ನೂತನ ಮನೆಯನ್ನು ಉದ್ಘಾಟಿಸಿ ಮಾತನಾಡಿ,ಅತ್ಯಂತ ಬಡತನದಲ್ಲಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಾಸಕ್ಕೆ ಯೋಗ್ಯವಾದ […]

ಕಂಚುಗೋಡು ಸನ್ಯಾಸಿ ಬಲ್ಲೆಯಲ್ಲಿ ನೂತನ ಅಂಗನವಾಡಿ ಕೇಂದ್ರ ಉದ್ಘಾಟನೆ

ಕುಂದಾಪುರ:ಮೀನುಗಾರ ಕುಟುಂಬದ ಸದಸ್ಯರೆ ಹೆಚ್ಚಾಗಿ ವಾಸಮಾಡುತ್ತಿರುವ ಇವೊಂದು ಪರಿಸರದಲ್ಲಿ ಅಂಗನವಾಡಿ ಕೇಂದ್ರವನ್ನು ತೆರೆದಿರುವುದರಿಂದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ.ಸ್ವಂತ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ಕಾರ್ಯಚರಣೆ ಮಾಡಬೇಕಾಗಿರುವುದರಿಂದ ಪಂಚಾಯಿತಿ ಕಡೆಯಿಂದ ಎಲ್ಲಾ ರೀತಿಯಿಂದಲೂ ಸಹಕಾರ ನೀಡಲಾಗುವುದು ಎಂದು ಗುಜ್ಜಾಡಿ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಹೇಳಿದರು.ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕಂಚುಗೋಡು ಸನ್ಯಾಸಿ ಬಲ್ಲೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಅಂಗನವಾಡಿ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ಗುಜ್ಜಾಡಿ ಪಂಚಾಯಿತಿ ಸದಸ್ಯ ಜನಾರ್ದನ ಪೂಜಾರಿ,ಗಣಪತಿ ಪಟೇಲ್,ಸದಾಶಿವ,ಅಂಗನವಾಡಿ ಶಿಕ್ಷಕಿಯರು,ಗ್ರಾಮಸ್ಥರು,ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅನಾರೋಗ್ಯ ಪೀಡಿತ ವ್ಯಕ್ತಿಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ‌ ರಕ್ತದಾನ

ಕುಂದಾಪುರ:ಅನಾರೋಗ್ಯ ಪೀಡಿತರಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಶಂಕರನಾರಾಯಣ ಗ್ರಾಮದ ಉದಯ ಆಚಾರ್ಯ ಎನ್ನುವ ವ್ಯಕ್ತಿಗೆ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ‌ ಅವರು ಖುದ್ದಾಗಿ ರಕ್ತದಾನವನ್ನು ಮಾಡುವುದರ ಮುಖೇನ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.ಕುಂದಾಪುರ ತಾಲೂಕಿನ ಶಂಕರನಾರಾಯಣ ಭಾಗದ ಉದಯ್ ಆಚಾರ್ಯ ಎಂಬವರು ಅನಾರೋಗ್ಯ ನಿಮಿತ್ತ ಕುಂದಾಪ್ರದ ಆಸ್ಪತ್ರೆಗೆ ದಾಖಲಾಗಿದ್ದರು‌.ಅವರಿಗೆ ತುರ್ತಾಗಿ ರಕ್ತದ ಅವಶ್ಯಕತೆವಿದ್ದು.ಬ್ಲಡ್ ಬ್ಯಾಂಕ್‌ಗಳಲ್ಲಿ ವಿಚಾರಿಸಿದಾಗ ರಕ್ತದ ಕೊರತೆಯಿಂದ ಸೂಕ್ತ ಸಮಯದಲ್ಲಿ ರೋಗಿಗೆ ರಕ್ತ ಸಿಗಲಿಲ್ಲ.ರೋಗಿಗೆ ತುರ್ತು ಸಂದರ್ಭದಲ್ಲಿ ರಕ್ತ ನೀಡಲೆ ಬೇಕಾಗಿದ್ದರಿಂದ ಕುಟುಂಬ ಸಂಕಷ್ಟಕ್ಕೆ […]

You cannot copy content of this page