ನಿಂತಿದ್ದ ಟಿಪ್ಪರ್ ಗೆ ಬೊಲೆರೋ ಡಿಕ್ಕಿ ಚಾಲಕ ಗಂಭೀರ

ಉಡುಪಿ:ರಾಷ್ಟ್ರೀಯ ಹೆದ್ಧಾರಿ 66 ರ ಕೊಪ್ಪಲಂಗಡಿ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟಿಪ್ಪರ್ ವಾಹನಕ್ಕೆ ಬೊಲೆರೋ ವಾಹನವೊಂದು ಹಿಂದಿನಿಂದ ಡಿಕ್ಕಿ‌ಹೊಡೆದಿದೆ.ಅಪಘಾತದಲ್ಲಿ ಬೊಲೆರೋ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.ಮಂಗಳೂರಿನಿಂದ ಉಡುಪಿಯತ್ತ ಚಲಿಸುತ್ತಿದ್ದ ಬೊಲೆರೋ ವಾಹನ ರಸ್ತೆ ಬದಿ ನಿಂತಿದ್ದ ಟಿಪ್ಪರ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು,ಅಪಘಾತದ ರಭಸಕ್ಕೆ ಬೊಲೆರೋ ವಾಹನದ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.ಗಂಭೀರವಾಗಿ ಗಾಯಗೊಂಡಿರುವ ಚಾಲಕನನ್ನು ಸ್ಥಳೀಯರು ತಕ್ಷಣ ಉಡುಪಿಯ ಆಸ್ಪತ್ರೆಗೆ ರವಾನಿಸಿದ್ದಾರೆ.

ಮೇ.20 ರಂದು ಬಸ್ರೂರುನಲ್ಲಿ ಊರಾಗ್ ಒಂದ ಕಾರ್ ಹಬ್ಬ ಕಾರ್ಯಕ್ರಮ

ಕುಂದಾಪುರ:ಯುನೈಟೆಡ್ ಟೊಯೋಟಾ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಊರಾಗ್ ಒಂದ ಕಾರ್ ಹಬ್ಬ ಕಾರ್ಯಕ್ರಮ ಬಸ್ರೂರು ಜಂಕ್ಷನ್ ನಲ್ಲಿ ಮೇ.20 ರಿಂದ ಮೇ.26 ರ ವರೆಗೆ ನಡೆಯಲಿದೆ.ಊರಾಗ್ ಒಂದ ಕಾರ್ ಹಬ್ಬದ ಅಂಗವಾಗಿ ಗ್ರಾಹಕರಿಗೆ ಆಕರ್ಷಕ ಆಫರ್ ಗಳನ್ನು ನೀಡಲಾಗುತ್ತಿದ್ದು.ತಮ್ಮ ಹಳೆ ಕಾರನ್ನು ನೀಡಿ ಉತ್ತಮ ಬೆಲೆಯನ್ನು ಪಡೆದುಕೊಂಡು ಹೊಸ ಕಾರನ್ನು ಖರೀದಿಸಲು ಅವಕಾಶವನ್ನು ಕಲ್ಪಿಸಲಾಗಿದೆ.ಗ್ಲಾಂಝಾ ಕಾರ್ ಹಾಗೂ ಹೈರೈಡರ್ ಕಾರ್ ಗೆ ಒಂದು ಲಕ್ಷದ ವರೆಗೆ ಡಿಸ್ಕೌಂಟ್ ಆಫರ್ ಕಂಪನಿ ಕಡೆಯಿಂದ ನೀಡಲಾಗಿದ್ದು.ಪೋರ್ರ್ಚುನರ್ ಕಾರ್ […]

ಮೇಕೋಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಹಬ್ಬ

ಕುಂದಾಪುರ:ಬೈಂದೂರು ತಾಲೂಕಿನ 11ನೇ ಉಳ್ಳೂರು ಮೂಡುಮರ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಮೇಕೋಡು ವಾರ್ಷಿಕ ಹಬ್ಬ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶನಿವಾರ ವಿಜೃಂಭಣೆಯಿಂದ ನಡೆಯಿತು.ಅಮ್ಮನವರ ವಾರ್ಷಿಕ ಹಬ್ಬದ ಪ್ರಯುಕ್ತ ಚಂಡಿಕಾಹೋಮ,ಕಲಶಾಭಿಷೇಕ,ಮಹಾಮಂಗಳಾರತಿ,ಪಂಚವಿಂಶತಿ ಕಲಶಸ್ಥಾಪನೆ,ಕಲಾತತ್ವಹೋಮ,ಅಧಿವಾಸಹೋಮ,ಗಣಪತಿ ಪ್ರಾರ್ಥನೆ,ಮಹಾ ಅನ್ನಸಂತರ್ಪಣೆ, ಹಾಗೂ ಪೆರ್ಡೂರು ಮೇಳದವರಿಂದ ಯಕ್ಷಗಾನ ಕಾರ್ಯಕ್ರಮ ಜರುಗಿತು.ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀದೇವರಿಗೆ ಹರಕೆಯನ್ನು ಸಲ್ಲಿಸಿ ಅನ್ನಪ್ರಸಾದ ಸ್ವೀಕರಿಸಿದರು.ಮೇಕೋಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅವರು ಮಾತನಾಡಿ,ಸುಮಾರು 45 ವರ್ಷಗಳಿಂದ ದಾನಿಗಳು ಹಾಗೂ ಭಕ್ತರ ಸಹಕಾರದಿಂದ ವಾರ್ಷಿಕ ಹಬ್ಬವನ್ನು ಬಹಳ […]

You cannot copy content of this page