ಜೂನ್.29 ರಂದು ಭೀಮ ಶಕ್ತಿ ಸಮಾವೇಶ

ಬೈಂದೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದ ಜಿಲ್ಲಾ ಸಮಿತಿ ವತಿಯಿಂದ ಬೈಂದೂರು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಭೀಮ ಶಕ್ತಿ ಸಮಾವೇಶ ಜೂನ್.29 ರಂದು ಬೈಂದೂರು ರೋಟರಿ ಸಮುದಾಯ ಭವನದಲ್ಲಿ ನಡೆಯಲಿದೆ.ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಕಾರ್ಯಕ್ರಮ ಉದ್ಘಾಟಿಸಲಿದ್ದು,ಜಿಲ್ಲಾ ಪ್ರಧಾನ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ಅಧ್ಯಕ್ಷತೆ ವಹಿಸಲಿದ್ದಾರೆ.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದು.ಅತಿಥಿಗಣ್ಯರು ಇವೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಆಯುರ್ವೇದ ವೈದ್ಯ ಡಾ.ಶ್ರೀನಿವಾಸ್ ಪೈ

ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು ಸಹೋದರ,ಇಬ್ಬರು ಸಹೋದರಿ ಇದ್ದಾರೆ.ಕುಂದಾಬಾರಂದಾಡಿ ಹಕ್ಲಾಡಿ,ಹೊಸಾಡು ಮುಳ್ಳಿಕಟ್ಟೆಯಲ್ಲಿ ಸೇವೆಯನ್ನು ಸಲ್ಲಿಸಿರುವ ಡಾ.ಶ್ರೀನಿವಾಸ ಪೈ ಗಿಡಮೂಲಿಕೆ ವೈದ್ಯರೆಂದು ಪ್ರಸಿದ್ಧಿ ಪಡೆದಿದ್ದರು.10 ರೂಪಾಯಿಗೆ ಔಷಧವನ್ನು ನೀಡುತ್ತಿದ್ದ ಅವರು ಬಡವರ ಪಾಲಿನ ವೈದ್ಯರೆಂದು ಖ್ಯಾತಿ ಹೊಂದಿದ್ದರು.

ವ್ಯಾಯಾಮ ಮತ್ತು ಯೋಗಾಸನ ನಡುವಿನ ವ್ಯತ್ಯಾಸ ಕಾರ್ಯಕ್ರಮ ಚಂದನ ಟಿವಿಯಲ್ಲಿ ನೇರ ಪ್ರಸಾರ

ಕುಂದಾಪುರ:ದೂರದರ್ಶನ ಚಂದನ ಟಿವಿಯಲ್ಲಿ ಜೂನ್.16 ರ ಬೆಳಿಗ್ಗೆ 8 ಕ್ಕೆ ಯೋಗಾಚಾರ್ಯ ಸಂತೋಷ್ ಕುಮಾರ್ ಅವರಿಂದ ವ್ಯಾಯಾಮ ಮತ್ತು ಯೋಗಾಸನ ನಡುವಿನ ವ್ಯತ್ಯಾಸ ನೇರ ಪ್ರಸಾರ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

You cannot copy content of this page