ಯಕ್ಷಗಾನ ಕಲಾವಿದರಿಗೆ ಸನ್ಮಾನ

ಕುಂದಾಪುರ:ತಾಲೂಕಿನ ತ್ರಾಸಿ ಕೊಳ್ಕೆರಿಯಲ್ಲಿ ನಡೆದ ಮಾರಣಕಟ್ಟೆ ಯಕ್ಷಗಾನ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರಾದ ಸುರೇಂದ್ರ ಆಲೂರು,ನಾಗೇಂದ್ರ ಉಪ್ಪುಂದ,ಶೀನ ನಾಯ್ಕ್ ಹಾಗೂ ಮೇಳದ ಕಾರ್ಮಿಕ ಸುಧಾಕರ ಮೊವಾಡಿ ಅವರನ್ನು ಸನ್ಮಾನಿಸಲಾಯಿತು.ಅಶೋಕ್ ಶೆಟ್ಟಿ,ಪಾಂಡುರಂಗ ದೇವಾಡಿಗ,ರಘು ಪೂಜಾರಿ,ಹರೀಶ್ ಪೂಜಾರಿ,ರವಿ ಶೆಟ್ಟಿಗಾರ್ ತ್ರಾಸಿ ಉಪಸ್ಥಿತರಿದ್ದರು.

ದ್ರಾವಿಡ ಬ್ರಾಹ್ಮಣ ಪರಿಷತ್ ಗುಜ್ಜಾಡಿ ವಲಯದ ವಾರ್ಷಿಕ ಮಹಾಸಭೆ,ಪುಸ್ತಕ ವಿತರಣೆ

ಕುಂದಾಪುರ:ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಗುಜ್ಜಾಡಿ ವಲಯದ ವಾರ್ಷಿಕ ಮಹಾಸಭೆ,ಪುಸ್ತಕ ವಿತರಣೆ ಹಾಗೂ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ತ್ರಾಸಿ ಕಮ್ಮಾರಕೊಡ್ಲು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.ಕುಂದಾಪುರ ತಾಲೂಕು ಬ್ರಾಹ್ಮಣ ಪರಿಷತ್ ಅಧ್ಯಕ್ಷ ಎಚ್.ಎಸ್ ಹತ್ವಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಗುಜ್ಜಾಡಿ ವಲಯ ಅಧ್ಯಕ್ಷ ವಿಶ್ವಂಭರ ಐತಾಳ,ಮಹಿಳಾ ಅಧ್ಯಕ್ಷೆ ಸಂಧ್ಯಾ ಕಾರಂತ,ರತ್ನಾಕರ ಉಡುಪ,ರಘುರಾಮ ರಾವ್,ಸಂಧ್ಯಾ ಉಡುಪ,ಅಧ್ಯಾಪಕರಾದ ವೆಂಕಟೇಶ ಮೂರ್ತಿ,ಡಿ.ಎಂ ಕಾರಂತ,ವಿಷ್ಣುಮೂರ್ತಿ ಕಾರಂತ,ಸುರೇಂದ್ರ ನಾವುಡ ಉಪಸ್ಥಿತರಿದ್ದರು.ಶಿಕ್ಷಕ ಭಾಸ್ಕರ ಮಯ್ಯ ಮತ್ತು ರಾಮಚಂದ್ರ ಮಯ್ಯ ಅವರು ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದರು.ಸಾಮೂಹಿಕ […]

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

ಮಂಗಳೂರು:ಚಲಿದುತ್ತಿದ್ದ ಕಾರಿನ ಮೇಲೆ ಮರ ಹಾಗೂ ವಿದ್ಯುತ್ ಕಂಬ ಬಿದ್ದು ಇಬ್ಬರು ಗಾಯಗೊಂಡ ಘಟನೆಮಾಣಿ – ಮೈಸೂರು ಹೆದ್ದಾರಿಯ ಕುಕ್ಕರಬೆಟ್ಟಿನಲ್ಲಿ ನೇ ಸಂಭವಿಸಿದೆ.ಘಟನೆಯಲ್ಲಿಕಾರು ನಜ್ಜುಗುಜ್ಜಾಗಿದೆ‌.ಮಂಗಳೂರಿನಿಂದ ನಾಲ್ವರು ಕಾರಿನಲ್ಲಿ ಮೈಸೂರಿಗೆ ಹೋಗುತ್ತಿದ್ದಾಗ ಸಮಯದಲ್ಲಿ ಇನೊಂದು ಘಟನೆ ಸಂಭವಿಸಿದೆ.ಗಾಯಾಳುಗಳಿಬ್ಬರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.ಕಾರಿನಲ್ಲಿದ್ದ ಇನ್ನಿಬ್ಬರು ಪಾರಾಗಿದ್ದಾರೆಘಟನೆ ನಡೆದ ತಕ್ಷಣ ಧಾವಿಸಿದ ಸ್ಥಳೀಯರು ಗಾಯಾಳುಗಳನ್ನು ಹೊರ ತೆಗೆದು ಉಪಚರಿಸಿ ಆಸ್ಪತ್ರೆಗೆ ಸಾಗಿಸಿದರು.ಘಟನೆಯಿಂದಾಗಿ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.

You cannot copy content of this page