ಎನ್ಎಂಎಂಎಸ್ ವಿದ್ಯಾರ್ಥಿ ವೇತನಕ್ಕೆ ಸಜನಿ ಆಯ್ಕೆ

ಕುಂದಾಪುರ:2023-24ನೇ ಸಾಲಿನ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ವತಿಯಿಂದ ನಡೆಸಲ್ಪಟ್ಟ ಎನ್‍ಎಂಎಂಎಸ್ ಅರ್ಹತಾ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 8ನೇ ತರಗತಿ ವಿದ್ಯಾರ್ಥಿನಿ ಸಜನಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.48 ಸಾವಿರ ವಿದ್ಯಾರ್ಥಿ ವೇತನ ದೊರಕಲಿದೆ.

ಸಮುದ್ರದಲ್ಲಿ ಛದ್ರಗೊಂಡ ಮೀನುಗಾರಿಕಾ ಬೋಟ್

ಗಂಗೊಳ್ಳಿ:ಭಟ್ಕಳ ತಾಲೂಕಿನ ವ್ಯಾಪ್ತಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಮಯದಲ್ಲಿ ಅಪಘಾತಕ್ಕೆ ಈಡಾಗಿದ್ದ ಮಾಲ್ತೀದೇವಿ-2 ಎನ್ನುವ ಬೋಟ್ ಗಂಗೊಳ್ಳಿ ಸಮುದ್ರ ಕಿನಾರೆಯಲ್ಲಿ ಅಲೆಗಳ ಹೊಡೆತಕ್ಕೆ ಮಂಗಳವಾರ ಛದ್ರಗೊಂಡಿದೆ.ಬೋಟ್‍ನ ಪ್ರಮುಖ ಭಾಗಗಳು ಸಮುದ್ರ ಪಾಲಾಗಿದೆ.ಮೇ.16 ರಂದು ಮಲ್ಪೆಯಿಂದ ಭಟ್ಕಳ ಭಾಗಗಕ್ಕೆ ಮೀನುಗಾರಿಕೆಗೆ ತೆರಳಿದ್ದ ಮಾಲ್ತೀ ದೇವಿ-2 ಎನ್ನುವ ಬೋಟ್‍ಗೆ ಮೇ.17 ರಂದು ಬೆಳಗಿನ ಜಾವಾ 5 ಗಂಟೆ ಸುಮಾರಿಗೆ ಅದೆ ಜಾಗದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದುರ್ಗಾ ಎನ್ನುವ ಬೋಟ್ ಡಿಕ್ಕಿ ಹೊಡೆದಿದೆ.ಅಪಘಾತಕ್ಕೆ ಈಡಾಗಿದ್ದ ಬೋಟ್‍ನ್ನು ಪಾಂಚಜನ್ಯ ಹಾಗೂ ದುರ್ಗಾ ಎನ್ನುವ […]

ಮರವಂತೆ:ನೃಸಿಂಹ ಜಯಂತಿ,ವಿಷ್ಣು ಪಾರಾಯಣ

ಬೈಂದೂರು:ತಾಲೂಕಿನ ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ನೃಸಿಂಹ ಜಯಂತಿ ಮತ್ತು ವಿಷ್ಣು ಪಾರಾಯಣ,ಪ್ರಸಾದ ಭೋಜನ ವಿತರಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಂಗಳವಾರ ನಡೆಯಿತು.ಸಹಸ್ರಾರು ಭಕ್ತರು ದೇವಾಲಕ್ಕೆ ಆಗಮಿಸಿ ಶ್ರೀದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತೀಶ ಎಂ ನಾಯಕ್ ಮತು ಸದಸ್ಯರು,ಅರ್ಚಕರು,ಉಪಾದಿವಂತರು,ಗ್ರಾಮಸ್ಥರು ಉಪಸ್ಥಿತರಿದ್ದರು.

You cannot copy content of this page