ಸಿಡಿಲು ಬಡಿದು ಮೂರು ಮಹಿಳೆಯರಿಗೆ ಗಾಯ

ಮಂಗಳೂರು:ಹುಲ್ಲು ಕೊಯ್ಯಲು ಹೋಗಿದ್ದ ಮೂವರು ಮಹಿಳೆಯರಿಗೆ ಸಿಡಿಲು ಬಡಿದ ಪರಿಣಾಮ ಗಾಯಗೊಂಡ ಘಟನೆ ಕೊಡಂಬೆಟ್ಟು ಗ್ರಾಮದಲ್ಲಿ ನಡೆದಿದೆ.ಗಾಯಾಳುಗಳನ್ನುಬಂಟ್ವಾಳ ಆಸ್ಪತ್ರೆಗೆ ದಾಖಲಾಲು ಮಾಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.ಕೊಡಂಬೆಟ್ಟು ಗ್ರಾಮದ ಸುಬ್ಬೊಟ್ಟು ನಿವಾಸಿಯಾದ ಅನಿತಾ ಪೂಜಾರಿ ಮತ್ತು ರಾಮಯ್ಯ ಗುರಿ ನಿವಾಸಿಯಾದ ಲೀಲಾವತಿ ಹಾಗೂ ಮೋಹಿನಿ ಎನ್ನುವವರಿಗೆ ಸಿಡಿಲು ಬಡಿದಿದೆ.

ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ

ಕುಂದಾಪುರ:ಮನೋಸೋ ಇಚ್ಛೆ ಮರಗಳನ್ನು ಕಡಿದು ಭೂಮಿಯನ್ನು ಬಗೆದಿದ್ದರ ಪರಿಣಾಮ ಪ್ರಕೃತಿಯಲ್ಲಿ ಅಸಮಾತೋಲನ ಉಂಟಾಗಿ ಮಳೆ,ಬೆಳೆ ಕುಂಠಿತವಾಗುತ್ತಿದೆ.ಶುದ್ಧ ಗಾಳಿ ಸೇವನೆಗೂ ಪರಿತಪಿಸುವಂತೆ ಆಗಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.ಬೈಂದೂರು ವಲಯದ ಬಡಾಕೆರೆ ಉತ್ತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡಗಳನ್ನು ವಿತರಿಸಿ ಅವರು ಮಾತನಾಡಿದರು.ಭೂಮಿ ಹಸಿರಾಗಿದ್ದಾರೆ ಮಾತ್ರ ಮಾನವ ಸಹಿತ ಜೀವಿ ಸಂಕುಲಗಳು ಬದುಕಬಹುದಾಗಿದೆ.ಗಿಡಗಳನ್ನು ನೆಟ್ಟು ಬೆಳೆಸಿ ಪೋಷಿಸುವುದರ ಮೂಲಕ ಪ್ರಕೃತಿ ಉಳಿವಿಗೆ ಎಲ್ಲರೂ ಕೈಜೋಡಿಸಬೇಕೆಂದು […]

ವಿದ್ಯಾ ಪೋಷಕ್ ಮನೆ ಹಸ್ತಾಂತರ

ಕುಂದಾಪುರ:ಯಕ್ಷಗಾನ ಕಲಾರಂಗ ಉಡುಪಿ,ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‍ಮೆಂಟ್,ಟ್ರೈನಿಂಗ್ ಆ್ಯಂಡ್ ರಿಸರ್ಚ್ ಸೆಂಟರ್,ಯಕ್ಷನಿಧಿ,ವಿದ್ಯಾ ಪೋಷಕ್ ಮನೆ ಹಸ್ತಾಂತರ ,ಯಕ್ಷಶಿಕ್ಷಣ ಹಾಗೂ ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ ಅವರ ಪ್ರಾಯೋಜಕತ್ವದಲ್ಲಿ ದಾನಿಗಳ ನೆರವಿನಿಂದ ಹೆಮ್ಮಾಡಿ ಗ್ರಾಮದ ಕಟ್ಟು ಎಂಬಲ್ಲಿ ನಿರ್ಮಿಸಿದ ನೂತನೆ ಮನೆ ಸರಸ್ವತಿ ನಿಲಯ ಅದರ ಹಸ್ತಾಂತ ಕಾರ್ಯಕ್ರಮ ಗುರುವಾರ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಜ್ಯೋತಿ ಬೆಳಗಿಸುವುದರ ಮುಖೇನ ನೂತನ ಮನೆಯನ್ನು ಉದ್ಘಾಟಿಸಿ ಮಾತನಾಡಿ,ಅತ್ಯಂತ ಬಡತನದಲ್ಲಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಾಸಕ್ಕೆ ಯೋಗ್ಯವಾದ […]

You cannot copy content of this page