ಆಲೂರು – ನೂಜಾಡಿಗೆ ಸರಕಾರಿ ಬಸ್ ಕಲ್ಪಿಸುವಂತೆ ಆಗ್ರಹ
ಕುಂದಾಪುರ:ಸ್ತ್ರೀ ಸಾಮಾನ್ಯರು ಕೂಲಿ ಕಾರ್ಮಿಕರು ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ದಿನಂಪ್ರತಿ ದೂರದ ಕುಂದಾಪುರ ಪೇಟೆಗೆ ತೆರಳುತ್ತಾರೆ.ಜನ ಸಂಖ್ಯೆಗೆ ಅನುಗುಣವಾಗಿ ಆಲೂರು-ಗುಡ್ಡೆಯಂಗಡಿ ಮಾರ್ಗದಲ್ಲಿ ಬಸ್‍ಗಳು ಓಡಾಟ ಮಾಡದೆ ಇದ್ದಿದ್ದರಿಂದ ಹಳ್ಳಿ ಭಾಗದ ಜನರಿಗೆ ಬಹಳಷ್ಟು ತೊಂದರೆ ಆಗುತ್ತಿದೆ.ವಿದ್ಯಾರ್ಥಿಗಳಿಗೆ ಹಾಗೂ ಜನ ಸಾಮಾನ್ಯರಿಗೆ ಆಗುತ್ತಿರುವ ಸಂಕಷ್ಟವನ್ನು ತಪ್ಪಿಸಲು ಆಲೂರು ಗುಡ್ಡೆಯಂಗಡಿ ಭಾಗಕ್ಕೆ ಸರಕಾರಿ ಬಸ್ ಓಡಿಸಲು ಕೂಡಲೆ ಕ್ರಮ ಕೈಗೊಳ್ಳಬೇಕೆಂದು ರಾಜು ಪಡುಕೋಣೆ ಆಗ್ರಹಿಸಿದರು.ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ಆಲೂರು,ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಆಲೂರು,ಕರ್ನಾಟಕ […]