ಮನೆ ಗೋಡೆ ಮೇಲೆ ಕಂಪೌಂಡ್ ಕುಸಿದು ಬಿದ್ದು,ಒಂದೇ ಕುಟುಂಬದ ನಾಲ್ವರು ದುರ್ಮರಣ
ಮಂಗಳೂರು:ಭಾರಿ ಮಳೆಗೆಕಂಪೌಂಡ್ ಗೋಡೆ ಮನೆ ಗೋಡೆ ಮೇಲೆ ಕುಸಿದು ಬಿದ್ದು ಒಂದೆ ಕುಟುಂಬದ ನಾಲ್ವರು ಮಲಗಿದ್ದಲ್ಲೇ ಸಾವನ್ನಪ್ಪಿದ ಘಟನೆ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಮದನಿನಗರದಲ್ಲಿ ಮಂಗಳವಾರ ನಸುಕಿನ ಜಾವ ಸಂಭವಿಸಿದೆ.ಮನೆಯೊಳಗೆ ವಿಶ್ರಾಂತಿ ಪಡೆದು ಕೊಳ್ಳುತ್ತಿದ್ದ ರಿಹಾನ ಮಂಝಿಲ್ ಯಾಸಿರ್(45), ಮರಿಯಮ್ಮ(40) ಮಕ್ಕಳಾದ ರಿಹಾನ (11)ಮತ್ತು ರಿಫಾನ (17) ಎಂಬುವರು ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.ಯಾಸೀರ್ ಮಂಗಳೂರಿನ ಬಂದರಿನಲ್ಲಿ ಮಡ್ಡಿ ಆಯಿಲ್ ನಿರ್ವಹಣೆ ಕಾರ್ಯ ನಿರ್ವಹಿಸುತ್ತಿದ್ದರು.ರಾತ್ರಿ ಸಮಯದಲ್ಲಿ ಸುರಿದ ಧಾರಾಕಾರ ಮಳೆಗೆ ಕಂಪೌಂಡ್ ಗೋಡೆ ಹಾಗೂ ಎರಡು ಅಡಕೆ ಮರ […]