ಅಪಾಯಕಾರಿ ಮರದ ಕಾಲು ಸಂಕ ಪರಿಶೀಲಿಸಿದ ಶಾಸಕ ಗುರುರಾಜ್ ಗಂಟಿಹೊಳೆ
ಬೈಂದೂರು:ಯಳಜಿತ್ ಗ್ರಾಮದ ಸಾತೇರಿಯಲ್ಲಿ ಮರದ ದಿಮ್ಮಿಗಳಿಂದ ನಿರ್ಮಿಸಲಾದ ಅಪಾಯಕಾರಿ ಕಾಲು ಸಂಕದಲ್ಲಿ ಸ್ವತಹ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಸಂಚಾರ ಮಾಡುವುದರ ಮುಖೇನ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಯಾವುದೇ ಕ್ಷಣದಲ್ಲೂ ಅಪಾಯ ತಂದೊಡ್ಡಬಹುದಾದ ಈ ಕಾಲುಸಂಕದ ಬದಲಾಗಿ ಶೀಘ್ರವೇ ಆಧುನಿಕ ಮಾದರಿಯ ಕಾಲು ಸಂಕ ನಿರ್ಮಿಸಿಕೊಡುವ ಭರವಸೆಯನ್ನು ಶಾಸಕರು ನೀಡಿದ್ದಾರೆ.