ಒತ್ತಿನೆಣೆ ಗುಡ್ಡ ಕುಸಿತದ ಭೀತಿ:ಹೆದ್ದಾರಿ ಸಂಪರ್ಕ ಕಡಿತ ಸಾಧ್ಯತೆ
ಕುಂದಾಪುರ:ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಶಿರೂರು ಒತ್ತಿನೆಣೆಯಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ.ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ವೇಳೆ ಗುಡ್ಡ ಕೊರೆಯಲಾಗಿದ್ದು.ಗುಡ್ಡದ ಮಣ್ಣು ಸಡಿಲಗೊಂಡಿದೆ ಗುಡ್ಡ ಕುಸಿದು ರಾಷ್ಟ್ರೀಯ ಹೆದ್ದಾರಿ ಮೇಲೆ ಬೀಳುವ ಸಂಭವ ಎದುರಾಗಿದ್ದು ಆತಂಕ ಸೃಷ್ಟಿಯಾಗಿದೆ.ಪ್ರತಿವರ್ಷದ ಮಳೆಗಾಲದ ಸಂದರ್ಭದಲ್ಲಿಯೂ ಇಲ್ಲಿ ಗುಡ್ಡ ಕುಸಿಯುವ ಭೀತಿ ಸೃಷ್ಟಿಯಾಗುತ್ತದೆ.ಸದ್ಯ ಒತ್ತಿನೆಣೆಯಲ್ಲಿ ನಿಧಾನವಾಗಿ ಗುಡ್ಡ ಜರಿಯಲು ಶುರುವಾಗಿದ್ದು,ಮಳೆ ಹೀಗೆ ಮುಂದುವರೆದರೆ ಸಂಪೂರ್ಣ ಗುಡ್ಡವೂ ಹೆದ್ದಾರಿ ಮೇಲೆ ಕುಸಿಯುವ ಆತಂಕವಿದೆ. ಒಂದು ವೇಳೆ ಗುಡ್ಡ ಜರಿದರೆ ಉತ್ತರ ಕನ್ನಡ ಉಡುಪಿ […]