ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ “ಐಕ್ಯಂ” 2k25 ಕಾರ್ಯಕ್ರಮ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ “ಐಕ್ಯಂ” 2025 ಅದ್ದೂರಿಯಿಂದ ನಡೆಯಿತು.ವಿಭಿನ್ನ ರೀತಿಯ ನೃತ್ಯ, ಸಂಗೀತದಿಂದ ಹಾಗೂ ಕಾಲೇಜಿನ ವಿದ್ಯಾರ್ಥಿಗಳೇ ಸ್ವತಃ ತಾವೇ ವಿನ್ಯಾಸಗೊಳಿಸಿರುವ ಸೀರೆಯ ಮೇಲೆ ಚಿತ್ರಗಳ ಚಿತ್ತಾರ,ಎಂಬ್ರಾಡರಿ ಪ್ರದರ್ಶನ ಮತ್ತು ರ್‍ಯಾಂಪ್ ವಾಕ್ ಜರುಗಿತು.ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಾನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.ರಾಜ್ಯಶಾಸ್ತ್ರ ನಿವೃತ್ತ ಉಪನ್ಯಾಸಕ ಡಾ.ದಯಾನಂದ ನಾಯಕ್ ಮಂಗಳೂರು ವಿಶ್ವವಿದ್ಯಾಲಯ ಹಾಗೂ ಅಧ್ಯಾಪಕರಾದ ಕರುಣಾಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಭವಿಷ್ಯವನ್ನು […]

ಯುವಕ ಮಂಡಲ ತ್ರಾಸಿ 59ನೇ ವಾರ್ಷಿಕೋತ್ಸವ ಸಂಭ್ರಮ

ಕುಂದಾಪುರ:ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕಾರ್ಯಗಳೊಂದಿಗೆ ಊರಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಯುವಕ ಮಂಡಲದ ಕಾರ್ಯ ಇತರ ಸಂಘಟನೆಗಳಿಗೆ ಮಾದರಿ ಆಗಿದೆ ಎಂದು ಯುವಕ ಮಂಡಲದ ಗೌರವಾಧ್ಯಕ್ಷ ತ್ರಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಿಥುನ್ ಎಂ.ಡಿ ಬಿಜೂರು ಹೇಳಿದರು.ಕಲ್ಲಾನಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ನಡೆದ ಯುವಕ ಮಂಡಲ ತ್ರಾಸಿ ಅದರ 59ನೇ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಂಘದ 60ನೇ ವರ್ಷದ ಸವಿನೆನಪಿಗಾಗಿ ಸುಮಾರು 20 ಲಕ್ಷ.ರೂ ವೆಚ್ಚದಲ್ಲಿ ಸ್ವತಃ ಕಟ್ಟಡ ನಿರ್ಮಾಣ ಸಹಿತ […]

ಕೃಷ್ಣ ಮಠ ರಾಜಾಂಗಣದಲ್ಲಿ ಭರತ ನಾಟ್ಯ ಪ್ರದರ್ಶನ

ಉಡುಪಿ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ವಿದ್ಯಾರ್ಥಿಗಳಿಂದ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಭರತ ನಾಟ್ಯ ಪ್ರದರ್ಶನ ನಡೆಯಿತು.ವಿದ್ಯಾರ್ಥಿಗಳು ಹೆಜ್ಞೆ ಹಾಕುವುದರ ಮುಖೇನ ಶ್ರೀ ಕೃಷ್ಣನಿಗೆ ಸೇವೆಯನ್ನು ಸಲ್ಲಿಸಿದರು.ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ವಿದ್ಯಾರ್ಥಿಗಳನ್ನು ಗೌರವಿಸಿದರು.ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಸಂಸ್ಥಾಪಕಿ ಹೇಮ,ವಿದ್ಯಾರ್ಥಿಗಳಾದ ನಯನ,ಗವ್ಯ ಜಿ ಮೂರ್ತಿ,ಅಕ್ಷಯ,ವರ್ಷ,ಜೀವಿತ,ಅಕ್ಷಿರ ಉಪಸ್ಥಿತರಿದ್ದರು.ರಮೇಶ್ ಭಟ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.ಗವ್ಯ ಜಿ ಮೂರ್ತಿ ಐವತ್ತಕ್ಕೂ ಹೆಚ್ಚಿನ ಪ್ರದರ್ಶನವನ್ನು ನೀಡಿರುತ್ತಾರೆ.

You cannot copy content of this page