ತ್ರಾಸಿ:ಹೆದ್ದಾರಿಯಲ್ಲಿ ಕಾರಿಗೆ ಅಡ್ಡ ಬಂದ ಗೂಳಿ

ಕುಂದಾಪುರ:ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುರುಡೇಶ್ವರ ದಿಂದ ಉಡುಪಿಗೆ ಸಾಗುತ್ತಿದ್ದ ಕಾರಿಗೆ ತ್ರಾಸಿ ಸಮೀಪ ಮೊವಾಡಿ ಕ್ರಾಸ್‍ನಲ್ಲಿ ಗೂಳಿಯೊದು ಅಡ್ಡ ಬಂದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದೆ.ಅಪಘಾತದ ತೀವೃತೆ ಗೂಳಿ ಸ್ಥಳದಲ್ಲೆ ಮೃತಪಟ್ಟ ಘಟನೆ ಗುರುವಾರ ನಡೆದಿದೆ.ಉಡುಪಿ ಯಿಂದ ಮುರುಡೇಶ್ವರಕ್ಕೆ ತೆರಳಿ ಬಳಿಕ ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದರ್ಶನ ಮಾಡಿಕೊಂಡು ಮಾರ್ಗ ಮಧ್ಯದಲ್ಲಿ ಮರವಂತೆ ಬೀಚ್‍ಗೆ ಭೇಟಿ ಮರಳಿ ಉಡುಪಿಗೆ ಸಾಗುತ್ತಿದ್ದ ಸಮಯದಲ್ಲಿ ಮೊವಾಡಿ ಕ್ರಾಸ್‍ನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಡಿವೈಡರ್ ಮಧ್ಯೆ ಬೆಳೆದಿದ್ದ ಹಸಿ […]

ಅಬ್ಬರಿಸಿದ ಮಳೆಗೆ ಉಕ್ಕೇರಿದ ಕಡಲು:ಜನರಲ್ಲಿ ಮೂಡಿದ ಆತಂಕ

ಕುಂದಾಪುರ:ಬುಧವಾರ ಸುರಿದ ಭಾರಿ ಗಾಳಿ ಮಳೆಗೆ ಕಡಲು ಉಕ್ಕೇರಿದ ಪರಿಣಾಮ ಕಂಚುಗೋಡು ಭಾಗದಲ್ಲಿ ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸಿದೆ.ಅಲೆಗಳ ಹೊಡೆತಕ್ಕೆ ತೀರ ಪ್ರದೇಶದಲ್ಲಿ ಲಂಗರು ಹಾಕಿದ ದೋಣಿಗಳಿಗೆ ಹಾನಿ ಉಂಟಾಗಿದೆ.ಸಮುದ್ರ ನೀರು ಮನೆಗಳಿಗೂ ನುಗ್ಗಿದ್ದು ಜನರ ನಿದ್ದೆಗೆಡಿಸಿದೆ.ಏಕಾಏಕಿ ಹವಾಮಾನದಲ್ಲಿ ಏರುಪೇರು ಉಂಟಾಗಿದ್ದರಿಂದ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಭಾಗದ ಪ್ರದೇಶದಲ್ಲಿ ಮಳೆ ಅಬ್ಬರಿಸಿ ಸುರಿದಿದೆ.ಸಮುದ್ರ ಅಲೆಗಳು ತೀರಾ ಪ್ರದೇಶದತ್ತ ನುಗ್ಗಿದ್ದರಿಂದ ಕಂಚುಗೋಡು ಭಾಗದಲ್ಲಿ ಸಾಕಷ್ಟು ಹಾನಿ ಉಂಟಾಗಿದೆ.ಕೃಷಿ ಭೂಮಿಗಳು ನೀರಿನಲ್ಲಿ ಮುಳುಗಿದೆ.

ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನಿಂದ ಸಂಭ್ರಮದ ದಸರಾ ಆಚರಣೆ

ಕುಂದಾಪುರ:ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಕುಂದಾಪುರ,ಸುಜ್ಞಾನ ಪದವಿ ಪೂರ್ವ ಕಾಲೇಜು,ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ, ಯಡಾಡಿ-ಮತ್ಯಾಡಿ, ಇಲ್ಲಿ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.ಕರಾವಳಿ ಕರ್ನಾಟಕದಾದ್ಯಂತ ನವರಾತ್ರಿಯ ಉತ್ಸವವು ವಿಜ್ರಂಬಿಸುತ್ತಿದೆ ಮತ್ತು ಹುಲಿ ವೇಷ ಅಥವಾ ಹುಲಿ ನೃತ್ಯವು ಜನಮನ ಸೆಳೆಯುವ ಒಂದು ಸಾಂಸ್ಕೃತಿಕ ದೃಶ್ಯವಾಗಿದೆ. ಹುಲಿ ವೇಷ ಸಂಪ್ರದಾಯವು ಭಕ್ತಿಯಲ್ಲಿ ಆಳವಾಗಿ ಬೇರೂರಿದೆ.ಇದು ಪ್ರತಿಜ್ಞೆಯನ್ನು ಪೂರೈಸಲು ಅಥವಾ ದೈವಿಕ ರಕ್ಷಣೆಗಾಗಿ ದೇವಿಗೆ ಅರ್ಪಣೆಗಾಗಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ.ಇತ್ತೀಚಿನ ವರ್ಷಗಳಲ್ಲಿ ಈ ಪ್ರಾಚೀನ ಸಂಪ್ರದಾಯವು ತುಳುನಾಡು ಪ್ರದೇಶದಲ್ಲಿ ಸಾಂಸ್ಕೃತಿಕ ಹೆಮ್ಮೆಯ […]

You cannot copy content of this page