ಬೀಜಾಡಿ:ಅಲೆಗಳ ಸೆಳೆತಕ್ಕೆ ಕಡಲಿನಲ್ಲಿ ಕೊಚ್ಚಿ ಹೋದ ಇಬ್ಬರು ಯುವಕರು:ಓರ್ವ ಯುವಕನ ಶವ ಪತ್ತೆ

ಕುಂದಾಪುರ:ಬೀಜಾಡಿಯಲ್ಲಿ ಕಡಲಿಗೆ ಇಳಿದ ಯುವಕರಿಬ್ಬರು ಅಲೆಗಳ ಸೆಳೆತಕ್ಕೆ ನಾಪತ್ತೆ ಆಗಿದ್ದ ಘಟನೆ ಶನಿವಾರ ನಡೆದಿದೆ.
ಒಬ್ಬ ಯುವಕ ಉಸಿರುಗಟ್ಟಿ ಸಾವನ್ನಪ್ಪಿದ್ದು.ಇನ್ನೊರ್ವ ಯುವಕನಿಗಾಗಿ ಹುಡುಕಾಟ ಮುಂದುವರಿದಿದೆ.ಸತತ ಐದು ಗಂಟೆಗಳ ಕಾರ್ಯಾಚರಣೆ ಬಳಿಕ ಮೃತ ಯುವಕನ ಅಜಯ್ ಮೃತ ದೇಹ ಪತ್ತೆ ಆಗಿದೆ.ಅಗ್ನಿಶಾಮಕ ದಳ ಸಿಬ್ಬಂದಿಗಳು, ಸ್ಥಳೀಯರು ಪೊಲೀಸ ರಿಂದ ಕಾರ್ಯಾಚರಣೆ ಮುಂದುವರಿದಿದೆ.





























































































































































































































































































































































































































































































































































































































































































































































































































































































































































































































































































































































































































































































































































































































































































