ದೋಣಿ ರಿಂಗ್ ಕಳವು ಆರೋಪಿ ಬಂಧನ,ಸ್ವತ್ತು ವಶಕ್ಕೆ
ಕುಂದಾಪುರ:ಬೈಂದೂರು ಪೊಲೀಸ್ ಠಾಣಾ ಸರಹದ್ದಿನ ಉಪ್ಪುಂದ ಗ್ರಾಮದ ಕರ್ಕಿಕಳಿ ಎಡಮಾವಿನ ಹೊಳೆ ಸಮೀಪದ ದಡದಲ್ಲಿ ಎ.ಶ್ರೀನಿವಾಸ ಖಾರ್ವಿ ಎಂಬುವವರು ನಿಲ್ಲಿಸಿದ್ದ ಶ್ರೀ ಹಕ್ರೆಮಠ ಯಕ್ಷೇಶ್ವರಿ ಪ್ರಸಾದ ರಾಣಿ ಬಲೆ ದೋಣಿಯ ರೋಪನ್ನು ತುಂಡರಿಸಿ 95 ಹಿತ್ತಾಳೆಯ ರಿಂಗ್‍ಗಳನ್ನು ಕಳವು ಗೈದ ಆರೋಪಿಯನ್ನು ಸ್ವತ್ತು ಸಹಿತ ಬಂಧಿಸಲಾಗಿದೆ.
ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ನಿವಾಸಿ ಆರೋಪಿತ ಮಹೇಶ್ ಖಾರ್ವಿ (30 ವರ್ಷ) ಅವರನ್ನು ವಶಕ್ಕೆ ಪಡೆದು ಕೊಂಡಿದ್ದ ಪೊಲೀಸರು 1,00,000 ರೂ ಮೌಲ್ಯದ 95 ಹಿತ್ತಾಳೆ ರಿಂಗ್ ಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಡಾ.ಹರ್ಷ ಪ್ರಿಯಂವದಾ ಪ್ರೊಬೇಷನರಿ ಐಪಿಎಸ್ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಆರೋಪಿ ಪತ್ತೆಗೆ ಬಲೆಯನ್ನು ಬಿಸಲಾಗಿತ್ತು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ.ಸಿದ್ದಲಿಂಗಪ್ಪ ಹಾಗೂ ಪರಮೇಶ್ವರ ಹೆಗಡೆ ಉಡುಪಿ ಜಿಲ್ಲೆ ಅವರ ನಿರ್ದೇಶನದಲ್ಲಿ,ಬೆಳ್ಳಿಯಪ್ಪ ಕೆ.ಯು ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಹಾಗೂ ಸವಿತ್ರ ತೇಜ್ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ಅವರ ಮಾರ್ಗದರ್ಶನದಲ್ಲಿ ಡಾ.ಹರ್ಷ ಪ್ರಿಯಂವದಾ ಪ್ರೋಬೇಷನರಿ ಐಪಿಎಸ್,ತಿಮ್ಮೇಶ್ ಬಿ.ಎನ್ ಪಿ.ಎಸ್.ಐ. (ಕಾ.ಸು ) ಹಾಗೂ ಮಹೇಶ ಕಂಬಿ ಪಿ.ಎಸ್.ಐ,ಸೂರ ನಾಯ್ಕ ಎಎಸ್ ಐ,ಎಂಹೆಚ್ ಸಿ ನಾಗಶ್ರೀ,ಅಪರಾಧ ವಿಭಾಗದ ಸಿಬ್ಬಂದಿಯವರಾದ,ಸುಜಿತ್ ಕುಮಾರ್,ಮಾಳಪ್ಪ ದೇಸಾಯಿ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ ಕೆ ಐ.ಪಿ.ಎಸ್ ಅವರು ತಂಡವನ್ನು ಅಭಿನಂದಿದ್ದಾರೆ.