ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಾಮಾನ್ಯ ಸಭೆ 80.59 ಲಕ್ಷ.ರೂ ನಿವ್ವಳ ಲಾಭ:ಶೇ.12 ಡಿವಿಡೆಂಡ್ ಘೋಷಣೆ

Share

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು

ಕುಂದಾಪುರ:ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಶ್ರೀಮೂಕಾಂಬಿಕಾ ಸಭಾಭವನದಲ್ಲಿ ಸೋಮವಾರ ನಡೆಯಿತು.
5 ರಿಂದ 10ನೇ ತರಗತಿ ವರೆಗಿನ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದಿರುವ ಸಂಘದ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಎಚ್.ಮಂಜಯ್ಯ ಶೆಟ್ಟಿ ಹರ್ಕೂರು ಮಾತನಾಡಿ,ಆರಂಭದ ದಿನಗಳಲ್ಲಿ ನಷ್ಟದಲ್ಲಿದ್ದ ಸಂಘವನ್ನು ಸದಸ್ಯರು ಮತ್ತು ನಿರ್ದೇಶಕ ಮಂಡಳಿ ಅವರ ಸಹಕಾರದಿಂದ ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಾ ಇಂದು ಕುಂದಾಪುರ ತಾಲೂಕಿನಲ್ಲಿ ಉತ್ತಮ ಸಹಕಾರಿ ಸಂಘವಾಗಿ ಗುರುತಿಸಿಕೊಂಡಿದೆ.ರೈತರು ಮತ್ತು ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಹಾಕಿಕೊಂಡಿದ್ದ ವಿಶೇಷವಾದ ಯೋಜನೆಗಳಿಂದಾಗಿ ಜನರ ಪ್ರೀತಿ ವಿಶ್ವಾಸ ಗಳಿಸಿದೆ.ಬೆಳೆ ವಿಮೆ ಸೌಲಭ್ಯ ಮತ್ತು ಪಂಪ್ ಸೇಟ್‍ಗಳಿಗೆ ರೈತರು ಆಧಾರ್ ಜೋಡಣೆ ಮಾಡಿಕೊಳ್ಳುವುದರ ಮುಖೇನ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಸಂಘದ ಸಿಇಒ ಶಿವರಾಮ ಪೂಜಾರಿ ವಾರ್ಷಿಕ ವರದಿ ಮಂಡಿಸಿ ಮಾತನಾಡಿ,23 ವರ್ಷಗಳ ಹಿಂದೆ ಆರಂಭ ಗೊಂಡಿದ್ದ ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘವೂ ಹಲವಾರು ಏಳು ಬೀಳುಗಳನ್ನು ಎದುರಿಸುತ್ತಾ ಬಂದಿರುವ ನಮ್ಮ ಸಹಕಾರಿ ಸಂಘವೂ ಗ್ರಾಮೀಣ ಪ್ರದೇಶದ ಮಹಿಳೆಯರು ಕೃಷಿಕರ ಬೆಂಬಲದಿಂದ ಅಭಿವೃದ್ಧಿ ಪಥದತ್ತಾ ಸಾಗುತ್ತಾ ಬಂದಿದ್ದು ಪ್ರಸ್ತುತ ಸಾಲಿನಲ್ಲಿ 80.59 ಲಕ್ಷ.ರೂ ಲಾಭ ಗಳಿಸಲು ಸಾಧ್ಯವಾಗಿದೆ.ಸಂಘದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.12% ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸಂಘದ ಮ್ಯಾನೇಜರ್ ಸಂಜೀವ ಪೂಜಾರಿ ಸ್ವಾಗತಿಸಿ ಮಾತನಾಡಿ,ಸಾಲ ವಿತರಣೆ ಮತ್ತು ಮರುಪಾವತಿಯಲ್ಲಿ ಯಶಸ್ಸನ್ನು ಗಳಿಸಲು ಸಾಧ್ವವಾಗಿದ್ದರಿಂದ ಸಂಘವೂ ಅಭಿವೃದ್ಧಿಯನ್ನು ಗಳಿಸಲು ಸಾಧ್ಯವಾಗಿದೆ.ಪ್ರತಿಭಾನಿತ ಮಕ್ಕಳಿಗೆ ವಿದ್ಯಾರ್ಥಿವೇತನ,ಬಡರೋಗಿಗಳಿಗೆ ತುರ್ತು ಪರಿಹಾರ ನಿಧಿ,ಕೊರೊನಾ ಸಂದರ್ಭದಲ್ಲಿ ಕೈಗೊಂಡಿದ್ದ ಜನರಪರ ನೀತಿಗಳು,ಪ್ರಾಕೃತಿಕ ವಿಕೋಪದಿಂದ ಹಾನಿ ಉಂಟಾಗಿರುವ ಸಂತೃಸ್ತರಿಗೆ ನೆರವು ನೀಡುವುದರ ಮೂಲಕ ಸಂಘವು ಜನರ ಪ್ರೀತಿ ಪಾತ್ರಕ್ಕೆ ಒಳಗಾಗಿದೆ.ಸ್ವಸಾಹಯ ಸಂಘದ ಸದಸ್ಯರ ಬೆಂಬಲವೂ ಕೂಡ ಸ್ಮರಿಸುವಂತಹದ್ದು ಎಂದರು.
ಸಂಘದ ಉಪಾಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ,ನಿರ್ದೇಶಕರುಗಳಾದ ರತ್ನಾಕರ ಎಂ ಆಚಾರ್ಯ,ಹೆಚ್.ಶಂಕರ ಶೆಟ್ಟಿ,ಎಂ ಚಂದ್ರಶೇಖರ ಶೆಟ್ಟಿ,ಗಂಗಾಧರ ಆಚಾರ್ಯ,ಸುಬ್ಬ ಪೂಜಾರಿ,ರಾಜೇಶ ದೇವಾಡಿಗ,ಅಮರನಾಥ ಶೆಟ್ಟಿ,ಸುರೇಂದ್ರ,ಹರೀಶ್,ಲಲಿತಾ ಕುಲಾಲ್,ಅಕ್ಕಯ್ಯ ಯಾನೆ ಆಶಾ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.ಸಿಬ್ಬಂದಿ ಗಣೇಶ ನಿರೂಪಿಸಿದರು.
ವರದಿ:ಜಗದೀಶ್ ದೇವಾಡಿಗ

Advertisement

Share

Leave a comment

Your email address will not be published. Required fields are marked *

You cannot copy content of this page