ಸಮುದ್ರದಲ್ಲಿ ನಾಪತ್ತೆ ಆಗಿದ್ದ ಮೀನುಗಾರರ ಶವ ಪತ್ತೆ

ಬೈಂದೂರು:ಶಿರೂರು ಅಳ್ವೆಗದ್ದೆ ಎಂಬಲ್ಲಿ ಭಾನುವಾರ ಕೈರಂಪಣಿ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ಆಯತಪ್ಪಿ ಕಡಲಿಗೆ ಬಿದ್ದು ನಾಪತ್ತೆ ಆಗಿದ್ದ ಗಂಗೊಳ್ಳಿ ಮುಸಾಭ್ (22) ಹಾಗೂ ನಝಾನ್ (24) ಎನ್ನುವ ಯುವಕರಿಬ್ಬರ ಶವ ಸೋಮವಾರ ಮಂಜಾನೆ ಅಳ್ವೆಗದ್ದೆ ಕಡಲ ತೀರದಲ್ಲಿ ಪತ್ತೆಯಾಗಿದೆ.ಕಡಲಿನಲ್ಲಿ ನಾಪತ್ತೆ ಆಗಿದ್ದ ಯುವಕರಿಬ್ಬರ ಪತ್ತೆಗಾಗಿ ತೀವೃವಾದ ಶೋಧವನ್ನು ಮಾಡಲಾಗಿತ್ತು.ಮುಸಾಭ್ ಕಳೆದ ವಾರವಷ್ಟೆ ಭಟ್ಕಳದ ಅಂಜುಮಾನ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದರು.
ದುಬೈನಿಂದ ಊರಿಗೆ ಬಂದಿದ್ದ ನಝಾನ್:ಮೀನಿಗಾರಿಕೆ ತೆರಳಿದ್ದ ಸಂದರ್ಭ ಕಡಲಿಗೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದ ನಝಾನ್ ಅವರು ದುಬೈನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದರು.ಕಳೆದ ಹದಿನೈದು ದಿನದ ಹಿಂದೆ ರಜೆ ಮೇಲೆ ಊರಿಗೆ ಬಂದಿದ್ದರು.ಕಳೆದ ಎರಡು ತಿಂಗಳುಗಳ ಅವಧಿಯಲ್ಲಿ ಬೈಂದೂರು ತಾಲೂಕಿನಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ನಾಲ್ವರು ಮೀನಿಗಾರರು ಸಮುದ್ರದಲ್ಲಿ ಪಾಲಾಗಿ ಮೃತಪಟ್ಟಿದ್ದರು.





















































































































































































































































































































































































































































































































































































































































































































































































































































































































































































































































































































































































































































































































































































































































































