ರವಿ ಖಾರ್ವಿಗೆ ದೇಶದ ಅತ್ಯುತ್ತಮ ಸಮುದ್ರ ಮೀನು ಕೃಷಿಕ ಪ್ರಶಸ್ತಿ
ಕುಂದಾಪುರ:ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ(ಐಸಿಎಆರ್- ಸಿಎಂಎಫ್‍ಆರ್‍ಐ) ಮಂಗಳೂರು ಪ್ರಾದೇಶಿಕ ಕೇಂದ್ರ ಕರ್ನಾಟಕ ದಿಂದ ತರಬೇತಿ ಪಡೆದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದ ಪ್ರಗತಿಪರ ಮೀನು ಕೃಷಿಕ ರವಿ ಖಾರ್ವಿ,ಭಾರತ ಸರಕಾರದ ಮೀನುಗಾರಿಕೆ,ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ನೀಡುವ ಅತ್ಯುತ್ತಮ ಸಮುದ್ರ ಮೀನು ಕೃಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನವದೆಹಲಿಯಲ್ಲಿ ಗುರುವಾರ ನಡೆದ ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಮೀನುಗಾರಿಕಾ ಸಚಿವ ರಾಜೀವ್ ರಂಜನ್ ಸಿಂಗ್ ಅವರಿಂದ ರವಿ ಖಾರ್ವಿ ಅವರು ಪ್ರಶಸ್ತಿ ಪತ್ರ ಸಹಿತ 1 ಲಕ್ಷ ರೂ. ನಗದು ಪ್ರೆÇೀತ್ಸಾಹ ಧನವನ್ನು ಸ್ವೀಕರಿಸಿದರು.ಐಸಿಎಆರ್-ಸಿಎಂಎಫ್‍ಆರ್‍ಐನ ಮಂಗಳೂರು ಪ್ರಾದೇಶಿಕ ಕೇಂದ್ರದ ಮಾರ್ಗದರ್ಶನದಲ್ಲಿ ಸಮಗ್ರ ಮಲ್ಟಿ-ಟ್ರೋಫಿಕ್ ಅಕ್ವಾಕಲ್ಚರ್(ಐಎಂಟಿಎ) ಪದ್ಧತಿಯ ಯಶಸ್ವಿ ಅನುμÁ್ಠನಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ರವಿ ಖಾರ್ವಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪಂಜರ ಮೀನು ಕೃಷಿಯಲ್ಲಿ ಸಾಧನೆಯನ್ನು ಮಾಡಿರುವ ರವಿ ಖಾರ್ವಿ ಅವರಿಗೆ ಈ ಹಿಂದೆ ವಿಜಯ ಕರ್ನಾಟಕ ಪತ್ರಿಕೆ ಸೂಪರ್‍ಸ್ಟಾರ್ ರೈತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.