ಬಡಾಕೆರೆ ಶಾಲೆ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Share

ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಬಡಾಕೆರೆ ಶಾಲೆಯಲ್ಲಿನ ಎಲ್‍ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಬಾಲ್ಯ ಫೌಂಡೇಶನ್ ವತಿಯಿಂದ ಪುಸ್ತಕ,ಸ್ಕೂಲ್ ಬ್ಯಾಗ್ ಮತ್ತು ಶಾಲಾ ಕೊಠಡಿಗೆ ಪೇಂಟಿಂಗ್ ಕಾರ್ಯವನ್ನು ನೆರವೇರಿಸಲು ಧನಸಹಾಯದ ರೂಪದಲ್ಲಿ ಚೆಕ್ ಭಾನುವಾರ ವಿತರಿಸಲಾಯಿತು.
ಬಾಲ್ಯ ಫೌಂಡೇಶನ್ ಅಧ್ಯಕ್ಷ ಎಸ್.ನಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,
ಬಾಲ್ಯ ಫೌಂಡೇಶನ್ ಸಂಸ್ಥೆಯು ಸ್ವಾಮಿ ವಿವೇಕಾನಂದರ ತತ್ವ ಹಾಗು ಡಾ. ಅಬ್ದುಲ್ ಕಲಾಂ ಅವರ ಸಿದ್ಧಾಂತದಿಂದ ಪ್ರೇರೇಪಿತಗೊಂಡು 2009ರಲ್ಲಿ ಪ್ರಾರಂಭವಾಯಿತು.ಸಂಸ್ಥೆಯ ಗುರಿ ಮಕ್ಕಳಲ್ಲಿ ವಿದ್ಯಾಭ್ಯಾಸದ ಮಹತ್ವತೆಯನ್ನು ತಿಳಿಸುವುದು ಮತ್ತು ಪ್ರತಿಯೊಂದು ಮಗುವನ್ನು ಸತ್ಪ್ರಜೆಯನ್ನಾಗಿ ಮಾಡುವುದಾಗಿದೆ ಎಂದು ಹೇಳಿದರು.
ಆರೋಗ್ಯ ಹಾಗೂ ಶಾಲಾ ಅಭಿವೃದ್ಧಿ ವಿಭಾಗದಲ್ಲಿ ಸುಮಾರು 100ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು 15 ವರ್ಷಗಳಲ್ಲಿ ಪೂರ್ಣಗೊಳಿಸಿದೆ. ಕರ್ನಾಟಕದ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಮ್ಮ ಸಂಸ್ಥೆ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದೆ ಎಂದರು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀಧರ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು..ಶಾಲೆಯನ್ನು ದತ್ತು ಸ್ವೀಕಾರ ಮಾಡಿರುವ ದಾನಿಗಳಾದ ವೇದ ಮೂರ್ತಿ ಲಕ್ಷ್ಮೀಶ ಅಡಿಗ,ಮುಖ್ಯ ಶಿಕ್ಷಕ ರೋಹಿಣಿಹಾಗೂ ಎಸ್.ಡಿ.ಎಂ.ಸಿ ಸದಸ್ಯರು,ಶಿಕ್ಷಕ ವೃಂದದವರು,ಪೆÇೀಷಕರು,ಬಾಲ್ಯ ಫೌಂಡೇಶನ್ ಉಪಾಧ್ಯಕ್ಷ ನಾರಾಯಣಸ್ವಾಮಿ ಹೆಚ್ ಪಿ,ಕಾರ್ಯದರ್ಶಿ ಶ್ರೀನಿಧಿ ಬಿ ಜಿ, ಖಜಾಂಚಿ ಕಿರಣ್ ಮತ್ತು ಸದಸ್ಯರು,ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Share

Leave a comment

Your email address will not be published. Required fields are marked *

You cannot copy content of this page