ಗೋ ಕಳ್ಳರು ಅಂದರ್,ಪೊಲೀಸ್ ಇಲಾಖೆ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ
ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮದ ನಾಯಕವಾಡಿ ರಾಮ ದೇವಸ್ಥಾನದ ಬಳಿ ನಿದ್ರಿಸುತ್ತಿದ್ದ ಜಾನುವಾರುಗಳನ್ನು ಕದಿಯಲು ವಿಫಲ ಯತ್ನ ನಡೆಸಿ ಪರಾರಿಯಾಗಿದ್ದ ಆರೋಪಿತರಾದ ಮೊಹಮ್ಮದ್ ಸೀನಾನ್ (19) ಗುಲ್ವಾಡಿ ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನೊರ್ವನನ್ನು ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್ಐ ಹರೀಶ್ ಆರ್ ಮತ್ತು ತಂಡದ ಸಿಬ್ಬಂದಿಗಳು ಗುಲ್ವಾಡಿಯಲ್ಲಿ ಶನಿವಾರ ಬಂಧಿಸಿದ್ದಾರೆ.
ಸೆ.12 ರ ಬೆಳಗಿನ ಜಾವ 4.30 ರ ಸುಮಾರಿಗೆ ನಾಯಕವಾಡಿ ರಾಮ ದೇವಸ್ಥಾನದ ಬಳಿ ಮಲಗಿರುವ ಮೂರು ಗೋವುಗಳನ್ನು ಕದ್ದು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಲು ಯತ್ನಸಿಸುತ್ತಿದ್ದ ಸಂದರ್ಭದಲ್ಲಿ ರಾಮ ದೇವಸ್ಥಾನದ ಹಾಲ್ನಲ್ಲಿ ಮಲಗಿರುವ ವ್ಯಕ್ತಿಗಳಿಬ್ಬರು ಮೂತ್ರ ವಿಸರ್ಜನೆಗೆಂದು ಹೊರಗಡೆ ಬಂದತಹ ಸಮಯದಲ್ಲಿ ಅವರನ್ನು ನೋಡಿ ಹೆದರಿಕೊಂಡ ದನಕಳ್ಳರು ಸ್ಥಳದಲ್ಲೆ ಗೋವು ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ಬಿಟ್ಟು ಪರಾರಿಯಾಗಿದ್ದ ಪ್ರಕರಣಕ್ಕೆ ಸಬಂಧಿಸಿದಂತೆ ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್ಐ ಮತ್ತು ತಂಡದ ಸಿಬ್ಬಂದಿಗಳು ಮಿಂಚಿನ ಕಾರ್ಯಚರಣೆ ಮೂಲಕ ಸೆ.14 ರಂದು ಆರೋಪಿತರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.ಪೊಲೀಸ್ ಇಲಾಖೆ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸನೆಯನ್ನು ವ್ಯಕ್ತಪಡಿಸಿದರು.ಕಾರ್ಯಚರಣೆಯಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್ ಹರೀಶ್ ಆರ್ ಮತ್ತು ಗುಪ್ತದಳ ಪಿಎಸ್ಐ ಬಸವರಾಜ ಕನಶೆಟ್ಟಿ,ಸಿಬ್ಬಂದಿಗಳಾದ ರಾಜು ನಾಯ್ಕ,ಶಾಂತರಾಮ ಶೆಟ್ಟಿ,ರಾಘವೇಂದ್ರ ಪೂಜಾರಿ,ಸಂದೀಪ ಕುರಾಣಿ ಮತ್ತು ದಿನೇಶ್ ಭಾಗವಹಿಸಿದ್ದರು.