ಶಿಕ್ಷಕರ ವರ್ಗಾವಣೆ ಪಡುಕೋಣೆ ಶಾಲೆಯಲ್ಲಿ ಮುಂದುವರಿದ ಪೋಷಕರ ಪ್ರತಿಭಟನೆ
ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಪಡುಕೋಣೆ ಶಾಲೆಯಲ್ಲಿ ಕನ್ನಡ ಶಿಕ್ಷಕರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಮಕ್ಕಳ ಪೋಷಕರು ಕೈಗೊಂಡಿದ್ದ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ.ಶಿಕ್ಷಕರನ್ನು ನೇಮಕ ಮಾಡದೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹಠ ಹಿಡಿದು ಕುಳಿತ ಪೋಷಕರ ಪ್ರತಿಭಟನೆಯಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೆ ನಾಲ್ಕು ದಿನಗಳೆ ಕಳೆದು ಹೋಗಿದ್ದು ಮಕ್ಕಳ ಭವಿಷ್ಯ ಅತಂತ್ರವಾಗಿದೆ.
ಕನ್ನಡ ಶಿಕ್ಷಕರನ್ನು ವರ್ಗಾವಣೆ ಮಾಡಬಾರದೆಂದು ಮಡುಕೋಣೆ ಶಾಲೆಯ ಶಾಲಾಭಿವೃದ್ಧಿ ಮತ್ತು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಭೆ ನಡೆಸಿ ನಿರ್ಣಯ ಮಾಡಿ ಹಲವಾರು ಮನವಿಗಳನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದರು ಶಿಕ್ಷಣ ಇಲಾಖೆ ಯಾವುದೇ ರೀತಿ ಪ್ರತಿಕ್ರಿಯೆನ್ನು ನೀಡಿಲ್ಲ ಎಂದು ಎಸ್‍ಡಿಎಂಸಿ ಸದಸ್ಯರ ಆರೋಪವಾಗಿದೆ.
ಹೆಚ್ಚುವರಿ ನಿಯಮದ ಆಧಾರದ ಮೇಲೆ ಪಡುಕೋಣೆ ಶಾಲೆಯ್ಲಿ ಕನ್ನಡ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ.ಕನ್ನಡ ಶಾಲೆಯಲ್ಲಿ ಕನ್ನಡ ಶಿಕ್ಷರನ್ನು ವರ್ಗಾವಣೆ ಮಾಡಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗಲಿದೆ ಎನ್ನುವುದು ಮಕ್ಕಳ ಪೋಷಕರ ಆತಂಕ.
ಶಿಕ್ಷಣ ಇಲಾಖೆಯ 2021-2022ನೇ ಸಾಲಿನ ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆಯ ನಿಯಮದ ಪ್ರಕಾರ ಪ್ರಸಕ್ತ ಸಾಲಿನಲ್ಲಿ ರಾಜ್ಯಾದ್ಯಂತ ಕನ್ನಡ ಶಾಲೆಗಳಲ್ಲಿ ಶಿಕ್ಷಕರ ವರ್ಗಾವಣೆ ಪರ್ವ ಆರಂಭಗೊಂಡಿದ್ದು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಶಿಕ್ಷಕರ ವರ್ಗಾವಣೆಯನ್ನು ಖಂಡಿಸಿ ಪಡುಕೋಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಪೋಷಕರು ಕೈಂಗೊಡಿರುವ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ.ಶಾಲೆಗೆ ಶಿಕ್ಷರನ್ನು ನೇಮಕ ಮಾಡದೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹಠಕ್ಕೆ ಬಿದ್ದಿರುವ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದೆ ನಾಲ್ಕು ದಿನಗಳು ಕಳೆದು ಹೋಗಿದೆ.ಶಾಲೆ ಬಾಗಿಲು ತೆರೆದಿದ್ದರು ಮಕ್ಕಳು ಮಾತ್ರ ಶಾಲೆ ಕಡೆ ಬರುತ್ತಿಲ್ಲ.ಶಿಕ್ಷಣ ಇಲಾಖೆ ಗೊಂದಲದಿಂದ ಗ್ರಾಮೀಣ ಪ್ರದೇಶದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಭೀತಿ ಎದುರಾಗಿದೆ.