ವಿದ್ಯಾರ್ಥಿವೇತನಾ,ಪ್ರತಿಭಾ ಪುರಸ್ಕಾರ,ಪುಸ್ತಕ ವಿತರಣೆ

ಕುಂದಾಪುರ:ರಾಮಕ್ಷತ್ರಿಯ ಸಂಘ ಗಂಗೊಳ್ಳಿ ವತಿಯಿಂದ ವಿದ್ಯಾರ್ಥಿ ವೇತನಾ,ಪ್ರತಿಭಾ ಪುರಸ್ಕಾರ ಮತ್ತು ಕೊಡೆ,ಪುಸ್ತಕ ವಿತರಣೆ ಕಾರ್ಯಕ್ರಮ ಶ್ರೀ ಸೀತಾರಾಮಚಂದ್ರ ಸಭಾಭವನ ಗಂಗೊಳ್ಳಿಯಲ್ಲಿ ನಡೆಯಿತು.
ರಾಮಕ್ಷತ್ರಿಯ ಸಂಘದ ಅಧ್ಯಕ್ಷ ರಾಜೇಶ್ ಎಮ್.ಜಿ ಅಧ್ಯಕ್ಷತೆ ವಹಿಸಿದ್ದರು.ಯುವಕ ಮಂಡಳ ಅಧ್ಯಕ್ಷ ರಾಜೇಂದ್ರ ಬಾಳಯ್ಯನ ಮನೆ,ಮಹಿಳಾ ಮಂಡಳಿ ಅಧ್ಯಕ್ಷೆ ಮೀನಾಕ್ಷಿ ರಾಮಚಂದ್ರ ಹಾಗೂ ರಾಮಕ್ಷತ್ರೀಯ ಸಂಘದ ಉಪಾಧ್ಯಕ್ಷ ಗಂಗಾಧರ ಉಗ್ರಾಣಿ ಮತ್ತು ವಾಸುದೇವ ನಡುಮನೆ,ಜೊತೆ ಕಾರ್ಯದರ್ಶಿ ಶ್ರೀನಿವಾಸ ಉಗ್ರಾಣಿ,ದಿನೇಶ ಉಗ್ರಾಣಿ,ಶ್ರೀಧರ ಹೊಸ್ಮನೆ,ನಾಗೇಶ್ ಅಪ್ಪಯ್ಯನ ಮನೆ,ರಾಧಾಕೃಷ್ಣ ಕೊಡಪಾಡಿ,ಕಾರ್ಯದರ್ಶಿ ಶ್ರೀಧರ ಎನ್ ಸಕ್ಲಾತಿ,ಸುರೇಶ ನಡುಮನೆ ಉಪಸ್ಥಿತರಿದ್ದರು.ಅಪ್ಪಯ್ಯನ ಮನೆ ಮಂಜುನಾಥ ಶೇರುಗಾರ್ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದರು.ರಕ್ಷಾ ಚಾರಿಟೇಬಲ್ ಟ್ರಸ್ಟ್ ಕೋಟೇಶ್ವರ ಅವತಿಯಿಂದ 1ನೇ ತರಗತಿ ಯಿಂದ ಪದವಿ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಪುಸ್ತಕ ಕೊಡುಗೆಯಾಗಿ ನೀಡಿದರು.ರಾಜೇಶ ಎಮ್.ಜಿ ಸ್ವಾಗತಿಸಿದರು.ಶ್ರೀಧರ ಸಕ್ಲಾತಿ ವಂದಿಸಿದರು.