ಮಾವು,ಹಲಸಿನ ಬೆಳೆ ಕುಂಠಿತ
ಕುಂದಾಪುರ:ಪ್ರತಿಕೂಲ ಹಾವಾಮಾನದಿಂದ ಈ ಸಲ ಮಾವು ಹಲಸು ಹಾಗೂ ಗೇರು ಬೆಳೆಯಲ್ಲಿ ಕುಂಠಿತವಾಗಿದೆ.ಒಂದು ತಿಂಗಳು ತಡವಾಗಿ ಮರಗಳಲ್ಲಿ ಫಲ ಪೂಷ್ಟ ಬಿಟ್ಟಿದೆ.ಹೇಳಿಕೊಳ್ಳುವಂತಹ ಬೆಳೆ ಎಲ್ಲಿಯೂ ಕಾಣಸಿಗದು ಈ ಬಾರಿ ಮಾವು,ಹಲಸು ಬಹಳಷ್ಟು ತುಟ್ಟಿಯಾಗಲಿದೆ.
ಹೂ ಬಿಟ್ಟ ಮಾವಿನ ಮರಕ್ಕಿಂತ ಫಲ ಇಲ್ಲದ ಮರಗಳೆ ಎಲ್ಲೆಲೂ ಕಣ್ಣಿಗೆ ಕಾಣ ಸಿಗುತ್ತಿದೆ.ಭಾಗಶಃ ಕಡೆಗಳಲ್ಲಿ ಇನ್ನೂ ಕೂಡ ಮಾವಿನ ಮರಗಳಲ್ಲಿ ಹೂ ಬಿಟ್ಟಿಲ್ಲ.ಮಾವಿನ ಮಿಡಿ ಕೊರತೆಯಿಂದ ಉಪ್ಪಿನ ಕಾಯಿ ತಯಾರಿಕೆಗೂ ತೊಂದರೆ ಆಗಿದೆ.ಮಾವಿನ ಮಿಡಿ ದರ ಮಾರುಕಟ್ಟೆಯಲ್ಲಿ ಕೊಂಡು ಕೊಳ್ಳದಷ್ಟು ದುಭಾರಿ ಯಾಗಿದೆ ಎಂದು ಮಹಿಳೆಯರು ಹೇಳುತ್ತಾರೆ.ಮರದ ತುಂಬೆಲ್ಲಾ ಬೀಡುತ್ತಿದ್ದ ಹಲಸಿನ ಮರಗಳಲ್ಲಿ ಒಂದೆರಡು ಫಲಗಳನ್ನು ನೋಡಲು ಮಾತ್ರ ಸಾಧ್ಯವಾಗುತ್ತಿದ್ದು ಹಲಸಿನ ಬೆಳೆಯಲ್ಲೂ ಕುಂಠಿತವಾಗಿದೆ.ಹಾವಾಮಾನ ವೈಪರಿತ್ಯದ ಕಾರಣದಿಂದಲೂ ್ಲ ಗೇರು ಬೆಳೆ ಕೈ ಕೊಟ್ಟಿದೆ.ಒಟ್ಟಾರೆ ಈ ಸಲ ಮಾವು,ಹಲಸು,ಗೇರು ಬೆಳೆ ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿ ಇಲ್ಲ ಎಂದು ರೈತರು ಹೇಳುತ್ತಾರೆ.