ನಾಡ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿಕ್ಮರಿಗೆ ಸನ್ಮಾನ

ಕುಂದಾಪುರ:ಶ್ರೇಷ್ಠ ವೈದ್ಯ ಪ್ರಶಸ್ತಿ ಪಡೆದ ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿಕ್ಮರಿ ಅವರನ್ನು ಬಿಲ್ಲವ ಫ್ರೆಂಡ್ಸ್ ನಾಡ ವತಿಯಿಂದ ನಾಡ ಪಂಚಾಯಿತಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಸ್.ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ,ಮಾಜಿ ತಾ.ಪಂ ಸದಸ್ಯ ಜಗದೀಶ್ ಪೂಜಾರಿ,ಶೇಖರ್ ಮಾಸ್ಟರ್,ಬಿಲ್ಲವ ಸಂಘ ಬೈಂದೂರು ಅಧ್ಯಕ್ಷ ಗಣೇಶ್ ಪೂಜಾರಿ,ವಾಸು ಪೂಜಾರಿ,ಉದಯ ಪೂಜಾರಿ,ಕ್ರಷ್ಣ ಪೂಜಾರಿ,ಸಂದೀಪ್ ಪೂಜಾರಿ ಉಪಸ್ಥಿತರಿದ್ದರು.ಗಿರೀಶ್ ಬಿಲ್ಲವ ಸ್ವಾಗತಿಸಿದರು.ರವಿ ಪೂಜಾರಿ ಬಡಾಕೆರೆ ನಿರ್ವಹಿಸಿದರು.ಕ್ರಷ್ಣ ಪೂಜಾರಿ ವಂದಿಸಿದರು.ನಾಡಾ,ಬಡಾಕೆರೆ,ಪಡುಕೋಣೆ,ಸೆನಾಪುರ ವ್ಯಾಪ್ತಿಯ ಬಿಲ್ಲವ ಸಂಘದ ಸದಸ್ಯರು ಭಾಗವಹಿಸಿದ್ದರು.