ಶ್ರೀಬಗಳಾಂಬ ತಾಯಿ ದೇವಸ್ಥಾನದ ದ್ವಾರಕ್ಕೆ ರಜತ ಕವಚ ಸಮರ್ಪಣೆ






ಕುಂದಾಪುರ:ಚಿಕ್ಕನ್‍ಸಾಲ್ ರಸ್ತೆ ಕುಂದಾಪುರ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಪುನರ್ ಪ್ರತಿಷ್ಠೆ,ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಶ್ರೀಬಗಳಾಂಬ ತಾಯಿ ದೇವಸ್ಥಾನದ ದ್ವಾರಕ್ಕೆ ರಜತ ಕವಚ ಸಮರ್ಪಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಾನುವಾರ ನಡೆಯಿತು.ಮಾಸ್ತಿ ಕಟ್ಟೆಯಿಂದ ದೇವಸ್ಥಾನದವರೆಗೆ ರಜತ ಕವಚವನ್ನು ಭವ್ಯ ಮೆರವಣಿಗೆ ಮೂಲಕ ತರಲಾಯಿತು.ಶ್ರೀದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಹಸಿರು ಹೊರೆ ಕಾಣಿಕೆ ಸಮರ್ಪಣೆ ಕಾರ್ಯ ಜರುಗಿತು.ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷರು,ಸದಸ್ಯರು,ಊರ ಹತ್ತು ಸಮಸ್ತರು ಹಾಗೂ ಶ್ರೀಮತಿ ಜಲಜ ಮತ್ತು ಗಣಪತಿ ಸುವರ್ಣ ಶ್ರೀ ಬಗಳಾಂಬ ತಾಯಿ ದೇವಸ್ಥಾನ ಕುಂದಾಪುರ ಉಪಸ್ಥಿತರಿದ್ದರು.































































































































































































































































































































































































































































































































































































































































































































































































































































































































































































































































































































































































































































































































































































































































































