ಚಿನ್ನಾಭರಣ ಸಹಿತ, ಆರೋಪಿಗಳ ಸೆರೆ:ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಕುಂದಾಪುರ:ಕುಂದಾಪುರ ತಾಲೂಕಿನ ಕೋಣಿ ಗ್ರಾಮದ ನಿವಾಸಿಯಾಗಿರುವ ಲಕ್ಷ್ಮೀ ಎಂಬುವವರ ಮನೆಯ ಗೋಡ್ರೆಜ್ ನಲ್ಲಿ ಇಟ್ಟಿದ್ದ ಸುಮಾರು 44 ಗ್ರಾಂ ತೂಕದ ಚಿನ್ನಾಭರಣವನ್ನು ಕಳವು ಗೈದಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಚಿನ್ನಾಭರಣ ಕಳವುಗೈದಿದ್ದಾರೆ.
ಕಳವಾದ ಒಟ್ಟು ಚಿನ್ನಾಭರಣಗಳ ಮೌಲ್ಯ ಸುಮಾರು 1,46,000/- ರೂಗಳಾಗಬಹುದು. ಎಂಬುವುದಾಗಿ ಠಾಣೆಗೆ ನೀಡಿದ ದೂರಿನಂತೆ ದಾಖಲಾಗಿದೆ.
ಪ್ರಕರಣದಲ್ಲಿನ ಆರೋಪಿ ಪತ್ತೆ ಬಗ್ಗೆ ಸ್ಥಳಿಯ ಬಾತ್ಮೀದಾರರ ಮಾಹಿತಿ ಕಲೆಹಾಕಿ,
ಕುಂದಾಪುರ ಕೋಣಿ ಗ್ರಾಮದ ನಿವಾಸಿ ಆರೋಪಿಯಾದ ವಿಜಯ ಎಂಬಾತನನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿ ಕಳವಾದ ಒಟ್ಟು 44 ಗ್ರಾಂ ತೂಕದ (ಸುಮಾರು 2,64,000ರ ಮೌಲ್ಯದ) ಚಿನ್ನಾಭರಣಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಸದ್ರಿ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕುಂದಾಪುರ ಪೊಲೀಸ್ ಠಾಣೆಯ ಪಿಐ ಯು ಬಿ ನಂದಕುಮಾರ,ಪಿ.ಎಸ್.ಐ ವಿನಯ ಕೊರ್ಲಹಳ್ಳಿ, ಪಿ.ಎಸ್.ಐ ಪ್ರಸಾದ ಕುಮಾರ್.ಕೆ ಹಾಗೂ ಸಿಬ್ಬಂದಿಯವರಾದ ಸಂತೋಷ ಕುಮಾರ್,ಶ್ರೀಧರ್,ರಾಮ ಪೂಜಾರಿ ಅವರು ವರು ಸದ್ರಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದಾರೆ.