ಕಾಸನಕಟ್ಟೆ ಗೇರು ತೋಪಿನಲ್ಲಿ ಅಗ್ನಿ ದುರಂತ

ಕುಂದಾಪುರ:ತಾಲೂಕಿನ ನೂಜಾಡಿ ಗ್ರಾಮದ ಕಾಸನಕಟ್ಟೆ ಗೇರು ತೋಪಿನಲ್ಲಿ ಶುಕ್ರವಾರ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತದಲ್ಲಿ ಸುಮಾರು 10 ಹೆಕ್ಟೇರ್ ನಷ್ಟು ಗೇರು ತೋಟ ಅಗ್ನಿಗೆ ಆಹುತಿ ಆಗಿದೆ. ಫಾರೇಸ್ಟ್ ಆನಂದ ಬಳೆಗಾರ್,ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಹೊಸಾಡು ಕೆಸಿಡಿಸಿ ಸಿಬ್ಬಂದಿಗಳು ಹಾಗೂ ಹಕ್ಲಾಡಿ ಪಂಚಾಯಿತಿ ಸದಸ್ಯ ಅಶೋಕ.ಕೆ ಪೂಜಾರಿ,ಆಶಾ ಕಾರ್ಯಕರ್ತೆ ಶಾರದ,ಉಗ್ರಾಣಿ ರತ್ನಾಕರ್,ಶಂಕರನಾರಯಣ ಭಟ್,ಗೋವಿಂದ ಪೂಜಾರಿ,ಸ್ಥಳೀಯರು ಹರಸಾಹಸಪಟ್ಟು ಬೆಂಕಿಯನ್ನು ನಂದಿಸಿರು.