ಶ್ರೀರಾಮೋತ್ಸವ,ಶ್ರೀರಾಮ ವೇಷ ಸ್ಪರ್ಧೆ
ಕುಂದಾಪುರ:ಅಯೋಧ್ಯೆ ಶ್ರೀರಾಮ ದೇವರ ಪ್ರತಿಷ್ಠೆ ಅಂಗವಾಗಿ ಹೊಸಾಡು ಗ್ರಾಮದ ಅರಾಟೆ ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀರಾಮ ದೇವರಿಗೆ ಹೂವಿನ ಅಲಂಕಾರ ಪೂಜೆ,ಮಂಗಳಾರತಿ ಸೇವೆ,ಹಣ್ಣು ಕಾಯಿ,ಹೋಮ,ಭಜನೆ,ಅನ್ನದಾನ ಸೇವೆ ಕಾರ್ಯಕ್ರಮ ಸೋಮವಾರ ನಡೆಯಿತು.ದೀಪಗಳನ್ನು ಬೆಳಗಿಸಿ ಆರಾಧಿಸಲಾಯಿತು.
ಪುಟಾಣಿ ಮಕ್ಕಳು ಶ್ರೀರಾಮ ದೇವರ ವೇಷ ಧರಿಸಿ ಸಂಭ್ರಮಸಿದರು.ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಭಜನೆ ಪುಸ್ತಕ ನೀಡಿ ಗೌರವಿಸಲಾಯಿತು.