ಹೆಮ್ಮಾಡಿ:ಸುನೀತಾ ಪೂಜಾರಿಗೆ ಸನ್ಮಾನ
ಕುಂದಾಪುರ:ಭಾರತೀಯ ಗಡಿ ರಕ್ಷಣ ಪಡೆಯಲ್ಲಿ ಸೈನಿಕರಾಗಿ ನೇಮಕಗೊಂಡಿರುವ ಹೆಮ್ಮಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸುನೀತಾ ಪೂಜಾರಿ ಅವರನ್ನು ಶಾಲೆಯ ಎಸ್‍ಡಿಎಂಸಿ ಮತ್ತು ಹಳೆ ವಿದ್ಯಾರ್ಥಿ ಸಂಘ ಹಾಗೂ ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು
ಶಾಲೆಯ ವಾಷಿಕೋತ್ಸವ ಸಮಿತಿ ಗೌರವಾಧ್ಯಕ್ಷ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಭಂಡಾರಿ,ವಾಷಿಕೋತ್ಸವ ಸಮಿತಿ ಅಧ್ಯಕ್ಷ ಶಾಂತರಾಮ್ ಭಟ್,ನಿವೃತ್ತ ಶಿಕ್ಷಕ ಶಂಕರ ಮಡಿವಾಳ,ಕುಂದಾಪುರ ಜೆಸಿಐ ಅಧ್ಯಕ್ಷ ರಾಘವೇಂದ್ರ ಕುಲಾಲ್,ಆದರ್ಶ ಯುವಕ ಮಂಡಲದ ಅಧ್ಯಕ್ಷ ಗುರುರಾಜ,ಜನತಾ ಪ್ರೌಢಶಾಲೆ ಶಿಕ್ಷಕ ಜಗದೀಶ ಶೆಟ್ಟಿ,ಸುನೀತಾ ಪೂಜಾರಿ ಪೆÇೀಷಕರಾದ ಸಂಜೀವ ಮತ್ತು ಗಂಗಾ ಪೂಜಾರಿ,ಸಮೂಹ ಸಂಪನ್ಮೂಲ ವ್ಯಕ್ತಿ ರಾಮನಾಥ್ ಮೇಸ್ತ ಉಪಸ್ಥಿತರಿದ್ದರು.ಶಾಲೆಯ ಮುಖ್ಯ ಶಿಕ್ಷಕ ವಿ.ದಿವಾಕರ ಸ್ವಾಗತಿಸಿದರು.ದೈಹಿಕ ಶಿಕ್ಷಕಿ ಒಲಂಪಿಯಾ ನಿರೂಪಿಸಿದರು.ಸಹ ಶಿಕ್ಷಕಿ ಸುಶೀಲಾ ವಂದಿಸಿದರು.