ಕಾಡಾನೆಗಳ ದಾಳಿಗೆ-ಅಡಿಕೆ ಗಿಡ ನಾಶ,ಸಾವಿರಾರು ರೂಪಾಯಿ ನಷ್ಟ
ಮಂಗಳೂರು:ತೋಟಕ್ಕೆ ನುಗ್ಗಿದ ಕಾಡಾನೆಗಳು ಅಡಿಕೆ ಗಿಡಗಳನ್ನು ನಾಶಪಡಿಸಿರುವ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದಲ್ಲಿ ನಡೆದಿದೆ.
ಶಿರಾಡಿ ಗ್ರಾಮದ ತೆಕ್ಕನಾಟ್ ನಿವಾಸಿ ಟಿ.ಎ.ತೋಮಸ್ ಎಂಬವರಿಗೆ ಸೇರಿದ ಅಡಿಕೆ ತೋಟಕ್ಕೆ ನ.24 ರ ಮಧ್ಯರಾತ್ರಿ ಕಾಡಾನೆಗಳ ಗುಂಪು ದಾಳಿ ನಡೆಸಿದ್ದು ೧೦೦ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ನಾಶಗೊಳಿಸಿವೆ.ಶಿರಾಡಿ ಗ್ರಾಮದ ಇತರೇ ಕಡೆಯೂ ಕೃಷಿ ತೋಟಕ್ಕೆ ಕಾಡಾನೆಗಳು ದಾಳಿ ಮಾಡಿದ್ದು ಅಡಿಕೆ, ಬಾಳೆ ಕೃಷಿ ನಾಶಗೊಳಿಸಿವೆ. ಕಾಡಾನೆಗಳನ್ನು ಸ್ಥಳಾಂತರಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.