ನವೆಂಬರ್.3 ರಂದು ಜನಶಕ್ತಿ ಸಮಾವೇಶ ಆಮಂತ್ರಣ ಪತ್ರಿಕೆ ಬಿಡುಗಡೆ

ಕುಂದಾಪುರ:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ವತಿಯಿಂದ ನವೆಂಬರ್.3 ರಂದು ನಾಡ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಲಿರುವ ನಾಡ (ಪಡುಕೋಣೆ) ಶಾಖೆ ಪುನರ್ ರಚನೆ,ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಜನಶಕ್ತಿ ಸಮಾವೇಶದ ಅಂಗವಾಗಿ ಆಮಂತ್ರಣ ಪತ್ರಿಕೆಯನ್ನು ಮೊವಾಡಿ ಸೇತುವೆ ಮೇಲೆ ಭಿನ್ನ ರೀತಿಯಲ್ಲಿ ಸೋಮವಾರ ಬಿಡುಗಡೆ ಮಾಡಲಾಯಿತು.
ವಕೀಲರಾದ ಮಂಜುನಾಥ ಗಿಳಿಯಾರ್ ಅವರು ಆಮತಂತ್ರಣ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ,ಸಂವಿಧಾನ ಬದ್ದ ಹಕ್ಕನ್ನು ಸಮುದಾಯ ಜನರಿಗೆ ಒದಗಿಸಿ ಕೊಡುವ ನಿಟ್ಟಿನಲ್ಲಿ ಹಾಗೂ ನೈತಿಕ ಶ್ಥೈರ್ಯ ತುಂಬುವ ದೃಷ್ಟಿಯಿಂದ ಜನಶಕ್ತಿ ಸಮಾವೇಶವನ್ನು ನಾಡದಲ್ಲಿ ಹಮ್ಮಿಕೊಳ್ಳಲಾಗಿದ್ದು.ಹೆಚ್ಚಿನ ಸಂಖ್ಯೆ ಸಮುದಾಯದ ಬಾಂಧವರು ಪಾಲ್ಗೊಳ್ಳಬೇಕೆಂದು ಹೇಳಿದರು.
ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ ಹಕ್ಲಾಡಿ ಮಾತನಾಡಿ,ನಮ್ಮದೊಂದು ಪ್ರಮಾಣಿಕ ಮತ್ತು ನಿಷ್ಠಾವಂತ ಸಂಘಟನೆ ಆಗಿದೆ.ನೊಂದ ಜನರಿಗೆ ಹಾಗೂ ಅಶಕ್ತರಿಗೆ ನ್ಯಾಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು.ಸಹಾಯ ಹಸ್ತವನ್ನು ಕೂಡ ಸಂಘಟನೆ ಮೂಲಕ ನೀಡಲಾಗುತ್ತಿದೆ ಎಂದರು.ಸಂಘಟನೆಗೆ ಶಕ್ತಿ ತುಂಬಲು ಸಮುದಾಯ ಬಾಂಧವರು ಸಹಕಾರ ನೀಡಬೇಕೆಂದು ಕೇಳಿಕೊಂಡರು.
ತಾಲೂಕು ಸಂಚಾಲಕ ಸತೀಶ ಕೆ ರಾಮನಗರ ಮಾತನಾಡಿ,ನಾಡ ಶಾಖೆ ಪುನರ್ ರಚನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನವೆಂಬರ್ 3 ರಂದು ನಾಡದಲ್ಲಿ ನಡೆಯಲಿದ್ದು,ಜನಶಕ್ತಿ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮುಖೇನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಬೈಂದೂರು ತಾಲೂಕು ಸಂಘಟನಾ ಸಂಚಾಲಕ ರಮೇಶ, ,ಸಂಯೋಚಿತ ಸಂಚಾಲಕ ಪ್ರದೀಪ ಜಿ.ಪಿ,ಸಂಚಾಲಕ ಸುರೇಶ,ಪ್ರಶಾಂತ,ಕೃಷ್ಣ,ರಾಮಕೃಷ್ಣ,ರಾಘವೇಂದ್ರ ಉಪಸ್ಥಿತರಿದ್ದರು.