ಏಪ್ರಿಲ್ 23 ರಂದು ಏಕ ಪವಿತ್ರ ನಾಗಮಂಡಲೋತ್ಸವ
ಕುಂದಾಪುರ:ತಾಲೂಕಿನ ಅಂಪಾರು ಗ್ರಾಮದ ಶಾನ್ಕಟ್ಟು ಕೆಳಗಿನ ಮನೆ ಕುಟುಂಬಸ್ಥರ ಆದಿ ನಾಗ ಬನದಲ್ಲಿ ಏಪ್ರಿಲ್ 23 ರ ಮಂಗಳವಾರದಂದು ಏಕ ಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.
ಏಕ ಪವಿತ್ರ ನಾಗಮಂಡಲೋತ್ಸವ ಅಂಗವಾಗಿ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.
ಹೊರೆ ಕಾಣಿಕೆ ಸಲ್ಲಿಸ ಬಯಸುವವರು ಎಪ್ರಿಲ್ 21 ರಿಂದ ಏಪ್ರಿಲ್ 22 ರ ವರೆಗೆ ಶ್ರೀ ನಾಗದೇವರ ಸನ್ನಿಧಿಯಲ್ಲಿ ನೀಡಬಹುದು ಎಂದು ಆಯೋಜಕರು ತಿಳಿಸಿದ್ದಾರೆ.